ಕುಮಟಾ : ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನಿಂದ ಶಿಷ್ಯವೇತನ ನೀಡಿ ಪ್ರೋತ್ಸಾಹಿಸಲಾಯಿತು. ವಿಶಿಷ್ಟ ಸಂದರ್ಶನದ ಮೂಲಕ ಆಯ್ಕೆಯಾದ ಮುಂದಿನ ದಿನಗಳಲ್ಲಿ ಸದ್ಗçಹಿಣಿ ಆಗಲು ಆವಶ್ಯಕ ಗುಣವುಳ್ಳ ಪ್ರೌಢಶಾಲಾ ವಿದ್ಯಾರ್ಥಿನಿಗಳನ್ನು ಸಜ್ಜನಿ ಪುರಸ್ಕಾರದಿಂದ ಗೌರವಿಸಲಾಯಿತು. ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೇರಣಾ ಟ್ರಸ್ಟ್ನ ಅಧ್ಯಕ್ಷ ಶ್ರೀ ವಸಂತ ಭಟ್ಟ, ಮನುಷ್ಯನಾದವನು ಎಂದಿಗೂ ಋಣದಲ್ಲಿರುತ್ತಾನೆ. ಆ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದಿನಗಳಲ್ಲಿ ಉನ್ನತ ಹುದ್ದೆಗೆ ತಲುಪಿ ಸಹಾಯದ ಅಪೇಕ್ಷೆಯಲ್ಲಿರುವವರಿಗೆ ಸಹಾಯ ಮಾಡಿ ಋಣಮುಕ್ತರಾಗಬಹುದು. ಆ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಅತಿಥಿಗಳಾದ ಶ್ರೀಮತಿ ಸುಧಾ ಶಾನಭಾಗ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕ್ಕೆ ಸದಾ ಮುಂಚೂಣಿಯಲ್ಲಿರುವ ಕೊಂಕಣ ಸಂಸ್ಥೆ, ಶಿಷ್ಯವೇತನಕ್ಕಾಗಿ ಸುಮಾರು ಹದಿನಾಲ್ಕು ಲಕ್ಷ ರೂಪಾಯಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಪ್ರೋತ್ಸಾಹಿಸಿದೆ. ಗೌರವ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ಮಾತನಾಡಿ, ಶಿಕ್ಷಣದ ಹಸಿವಿರುವ ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು ಇದರ ಪ್ರಯೋಜನ ಪಡೆದು ಜೀವನದಲ್ಲಿ ಸಾಧನೆಗೈಯಲಿ ಎಂದು ಶುಭ ಹಾರೈಸುತ್ತ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಠ್ಠಲ ನಾಯಕ ಮಾತನಾಡಿ, ಸಜ್ಜನಿ ಪುರಸ್ಕಾರವು ಕಳೆದ ಕೆಲವು ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಪ್ರದಾನ ಮಾಡಲಾಗುತ್ತಿದ್ದು, ಭವಿಷ್ಯದಲ್ಲಿ ಉತ್ತಮ ನಡವಳಿಕೆಯನ್ನು ಪ್ರದರ್ಶಿಸಿ ಕುಟುಂಬವನ್ನು ಮುನ್ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಬಹುದಾದAತಹ ಬಾಲೆಯರನ್ನು ಅವರ ಎಳವೆಯಲ್ಲಿಯೇ ಅವಲೋಕಿಸಿ ಪುರಸ್ಕರಿಸಿ, ಪಾಶ್ಚಾತ್ಯ ಮಾದರಿಯಲ್ಲಿ ಸಂಪ್ರದಾಯಬದ್ಧ ಭಾರತೀಯ ಕುಟುಂಬಗಳು ಬದಲಾಗುವದನ್ನು ತಪ್ಪಿಸುವ ನಿಟ್ಟಿನಲ್ಲಿ ಮಾಡುವ ನಮ್ಮ ಚಿಕ್ಕ ಪ್ರಯತ್ನ ಇದಾಗಿದೆ ಎಂದರು. ನಮ್ಮ ಸಂಸ್ಥೆಯಿAದ ಪ್ರತಿ ವರ್ಷವೂ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ದಾನಿಗಳಿಂದ ಸಂಗ್ರಹಿಸಿದ ಧನದಿಂದ ಶಿಷ್ಯವೇತನವನ್ನು ನೀಡಲಾಗುತ್ತಿದೆ. ಇದನ್ನು ಪ್ರಸಾದದಂತೆ ಸ್ವೀಕರಿಸಿ ನೀವು ಶ್ರದ್ಧೆಯಿಂದ ಶಿಕ್ಷಣವನ್ನು ಪಡೆಯಬೇಕು ಹಾಗೂ ಉನ್ನತ ಸ್ಥಾನಮಾನವನ್ನು ಭವಿಷ್ಯತ್ತಿನಲ್ಲಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಣಕಾಸಿನ ತೀರಾ ಅವಶ್ಯಕತೆಯಿರುವ ಸಂಸ್ಥೆಯ ಸಿಬ್ಬಂದಿಗಳಿಗೆ ಪ್ರತಿವರ್ಷ ಸಹಾಯಧÀನ ನೀಡಲು ‘ಆರ್ತ ಸಹಾಯ ನಿಧಿಯ’ ಘೋಷಣೆ ಮಾಡಲಾಯಿತು. ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ ಆರಂಭಿಕರಾಗಿ ನಿಧಿಗೆ ಒಂದು ಲಕ್ಷ ರೂಪಾಯಿಗಳ ದೇಣಿಗೆ ನೀಡಿದರಲ್ಲದೆ, ಪ್ರಸಕ್ತÀ ವರ್ಷ ಐವರು ಸಿಬ್ಬಂದಿಗಳಿಗೆ ತಲಾ ಎರಡು ಸಾವಿರ ರೂಪಾಯಿಯಂತೆ ಹತ್ತು ಸಾವಿರ ರೂಪಾಯಿಗಳ ಧನಸಹಾಯ ಮಾಡಿದರು.
ಟ್ರಸ್ಟಿಗಳಾದ ರಮೇಶ ಪ್ರಭು, ಡಿ.ಡಿ.ಕಾಮತ, ಅಂಗಸAಸ್ಥೆಗಳ ಮುಖ್ಯಸ್ಥರುಗಳಾದ ಸಾವಿತ್ರಿ ಹೆಗಡೆ, ಸುಜಾತಾ ನಾಯ್ಕ, ಸುಮಾ ಪ್ರಭು, ಪ್ರಾಚಾರ್ಯ ಕಿರಣ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಿ.ಡಿ.ಕಾಮತ ಸ್ವಾಗತಿಸಿದರು, ಸುಮಾ ಪ್ರಭು ವಂದಿಸಿದರು, ಶಿಕ್ಷಕರಾದ ಅಮಿತಾ ಗೋವೆಕರ್ ಹಾಗೂ ಅನಿತಾ ಪಟಗಾರ ನಿರೂಪಿಸಿದರು, ಭೂಮಿಕಾ ಸಂಗಡಿಗರು ಪ್ರಾರ್ಥಿಸಿದರು.