ಶಿರಸಿ: ಅತಿಥಿ ಶಿಕ್ಷಕನೋರ್ವ ತನ್ನದೇ ಕಾಲೇಜಿನ ವಿದ್ಯಾರ್ಥಿನಿಗೆ ಅಶ್ಲೀಲವಾಗಿ ಮೆಸೆಜ್ ಮಾಡಿದ ಹಿನ್ನೆಲೆಯಲ್ಲಿ ಅದನ್ನು ತಿಳಿದ ಹುಡುಗಿಯ ಸಹೋದರರು ಹಾಗು ಸಾರ್ವಜನಿಕರು ಲೆಕ್ಚರನಿಗೆ ಗೂಸಾ ಕೊಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ನಗರದ ಕಾಲೇಜೊಂದರಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕನೇ ವಿದ್ಯಾರ್ಥಿನಿಗೆ ಅಶ್ಲೀಲವಾದ ಮೆಸೆಜ್‌ನ್ನು ವಾಟ್ಸಪ್ ಮೂಲಕ ಹರಿಬಿಡುತ್ತಿದ್ದ ಎಂದು ಹೇಳಲಾಗಿದೆ.
ಮಧ್ಯಾಹ್ನ 4 ಗಂಟೆ ಸುಮಾರಿಗೆ ಸಾರ್ವಜನಿಕರೋರ್ವರು ಶಿಕ್ಷಕನಿಗೆ ದೂರವಾಣಿ ಮೂಲಕ ಎಲ್ಲಿದ್ದೀರಾ? ನಿಮ್ಮ ಹತ್ತಿರ ಮಾತನಾಡಬೇಕಿದೆ ಎಂದು ಕೇಳಿದಾಗ, ನಾನು ವಾಚನಾಲಯ ಬಳಿ ಇದ್ದೇನೆ ಎಂದು ಮಾಹಿತಿ ಕೊಟ್ಟ ಉಪನ್ಯಾಸಕನಿಗೆ ಅಲ್ಲಿಯೇ ಸುಮಾರು 10-15 ಜನರ ತಂಡ ಬಂದು ಪುಕ್ಕಟ್ಟೆ ಗೂಸಾ ನೀಡಿ, ಕಲಿಸುವ ವಿದ್ಯಾರ್ಥಿನಿಗೆ ಈ ರೀತಿಯ ಮೆಸೇಜ್ ಮಾಡುತ್ತೀಯಾ ಎಂದು ಬೈಯ್ದು ಹೋದ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಈ ವೇಳೆಗೆ ಶಿರಸಿ ಮಾರುಕಟ್ಟೆ ಠಾಣೆಯ ಪೊಲೀಸರು ಆಗಮಿಸಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಅವಘಡ ಏನೂ ನಡೆಯದೆ, ಉಪನ್ಯಾಸಕನನ್ನು ಠಾಣೆಗೆ ಕರೆದು ಬುದ್ಧಿವಾದ ಹೇಳಿದ ಪ್ರಸಂಗ ನಡೆದಿದೆ ಎನ್ನಲಾಗಿದೆ.
ಮೂಲ : ಕರಾವಳಿ ಮುಂಜಾವು.