ಕುಮಟಾ : ತಾಲೂಕಿನ ದೀವಗಿಯ ರಾಷ್ಟ್ರೀಯ ಹೆದ್ದಾರಿ 66ರ ಶಿರಸಿ ಕ್ರಾಸ್ ಬಳಿ ಬೈಕ್ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಮೃತಪಟ್ಟ ಘಟನೆ ಸಂಭವಿಸಿದೆ. ಮುಂಡಗೋಡ ತಾಲೂಕಿನ ಮೈನಳ್ಳಿ ನಿವಾಸಿ ಪ್ರವೀಣ ಬಾಬು ಮಲ್ಲಿಕ್(22) ಮೃತ ಬೈಕ್ ಸವಾರ. ಈತನು ಅಂಕೋಲಾದಿಂದ ಕುಮಟಾ ಕಡೆ ಬುರುತ್ತಿದ್ದ ಸಂದರ್ಭದಲ್ಲಿ ಕುಮಟಾದಿಂದ ಶಿರಸಿ ತೆರಳುತ್ತಿದ್ದ ಕಾರ ಚಾಲಕ ಮುಂಡಗೋಡ ತಾಲೂಕಿನ ಬೆಡಸಗಾಂವ ನಿವಾಸಿ ಉದಯಕುಮಾರ ಕಲ್ಕೂರ (35) ಅವರು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿಯಿಂದ ಬಂದು ಬೈಕ್‌ಗೆ ಡಿಕ್ಕಿಪಡಿಸಿದ್ದಾನೆ.
ತಕ್ಷಣ ಸ್ಥಳೀಯವರ ಸಹಕಾರದಲ್ಲಿ ಕುಮಟಾ ಸರ್ಕಾರಿ
ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ. ಆದರೆ ಪ್ರವೀಣ ಅವರ ತಲೆಗೆ ಗಂಭೀರ ಗಾಯಗೊಂಡಿರುವುದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.