ಭಟ್ಕಳ : ಗದ್ದೆ ಕೆಲಸ ಮುಗಿಸಿಕೊಂಡು ಮನೆಗೆ ಹಾಲು ಕೊಡಲು ರೈಲ್ವೆ ಹಳಿ ದಾಟುತ್ತಿದ್ದ ಮಹಿಳೆ ರೈಲು ಬಡಿದು ಸಾವನ್ನಪ್ಪಿರುವ ಘಟನೆ ಯಲ್ವಡಿಕೌವರ ಪಂಚಾಯತ ವ್ಯಾಪ್ತಿಯ ಕೊಂಕಣ ರೈಲ್ವೆ ಹಳಿ ಸಮೀಪ ನಡೆದಿದೆ. ಮೃತ ಮಹಿಳೆ ಈರಮ್ಮ ಮಂಜಯ್ಯ ನಾಯ್ಕ ಎಂದು ತಿಳಿದು ಬಂದಿದೆ. ಈಕೆ ಬೆಳ್ಳಿಗ್ಗೆ ಗದ್ದೆ ಕೆಲಸ ಮುಗಿಸಿಕೊಂಡು ಹಾಲನ್ನು ಮನೆಗೆ ಕೊಡಲು ಯಲ್ವಡಿಕೌವರ ಪಂಚಾಯತ ವ್ಯಾಪ್ತಿಯ ಕೊಂಕಣ ರೈಲ್ವೆ ಹಳಿ ದಾಟುತ್ತಿದ್ದ ವೇಳೆ ಯಾವುದೇ ರೈಲು ಢಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.