ಕುಮಟಾ : ಇತ್ತೀಚೆಗೆ ಆರೋಗ್ಯ ಇಲಾಖೆ ಕುಮಟಾ ಇವರ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಹಿರೇಗುತ್ತಿ ಕುಮಟಾದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ/ಆಜ್ನಾ ನಾಯಕ ಅವರು ಹದಿಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯದರಿವು ಕಾರ್ಯಕ್ರಮದಲ್ಲಿ ಹದಿಹರೆಯದ ಸಮಯದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳ ಮಾಸಿಕ ಋತುಚಕ್ರದ ಸಮಯದಲ್ಲಿನ ಗೊಂದಲ ಹಾಗೂ ತಪ್ಪು ತಿಳುವಳಿಕೆಗಳ ಮುಖಾಂತರ ಎದುರಾಗುವ ಸಮಸ್ಯೆಗಳನ್ನು ಎತ್ತಿ ಹೇಳಿದರು. ಆರೋಗ್ಯ ಕಾಪಾಡಿಕೊಳ್ಳುವಲ್ಲಿ , ಪೌಷ್ಟಿಕಾಂಶಗಳ ಸೇವನೆಯ ಮಹತ್ವದ ಕುರಿತು ತಿಳಿಸಿದರು. ಋತುಚಕ್ರದ ಸಮಯದ ದೈಹಿಕ ಸ್ವಚ್ಛತೆಯ ಬಗ್ಗೆ ಮಾತನಾಡುತ್ತಾ ಪ್ರತಿಯೊಬ್ಬರು ಆರೋಗ್ಯದ ಅರಿವು ಮೂಡಿಸಿಕೊಳ್ಳಬೇಕು. ಅದುವೇ ಸುಖ ಜೀವನದ ಸೋಪಾನ ಎಂದು ಅಭಿಪ್ರಾಯಪಟ್ಟರು.

RELATED ARTICLES  ಸಂಗೀತ ಪರೀಕ್ಷೆಯಲ್ಲಿ ಕುಮಟಾ ಬಾಲಕಿಯರ ಸಾಧನೆ

ಹದಿಹರೆಯ ಜೀವನದ ಪಕ್ವತೆಯ ಕಾಲ. ದೈಹಿಕ. ಮಾನಸಿಕ ಹಾಗೂ ಸಾಮಾಜಿಕ ಬದಲಾವಣೆಗಳಿಗೆ ತೀವ್ರವಾಗಿ ಒಳಗಾಗುವ ಈ ಸಮಯದಲ್ಲಿ ನಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಸ್ವಾತಂತ್ರ್ಯವನ್ನು ಅನುಭವಿಸುವ ಪ್ರಜ್ಞೆಯಲ್ಲಿ ಬದುಕಬೇಕು. ಎಂದು ಕೌನ್ಸಿಲರ್ ಪ್ರದೀಪ ನಾಯ್ಕ ಅರಿವು ನೀಡುತ್ತಾ ಮಾದಕವ್ಯಸನ ಮುಕ್ತ ಜೀವನದ ಸ್ವಾರಸ್ಯವನ್ನು ತಿಳಿಸಿದರು. ಹಿರೇಗುತ್ತಿಯ ವೈದ್ಯಾಧಿಕಾರಿ ಡಾ. ಪ್ರಥ್ವಿ.ಎಂ ರಕ್ತಹೀನತೆಗೆ ಕಾರಣ ಮತ್ತು ಪರಿಹಾರಕ್ಕೆ ಸೂಕ್ತ ಆಹಾರಾಭ್ಯಾಸಗಳ ಬಗ್ಗೆ ಮಾಹಿತಿ ನೀಡಿದರು.

RELATED ARTICLES  ಬೀದಿ ನಾಯಿಗಳ ಭಯದಿಂದ ತಪ್ಪಿಸಿಕೊಳ್ಳಲು ನಾಯಿಗಳನ್ನೇ ಅಟ್ಟಾಡಿಸಿ ಹೊಡೆದ ಭಟ್ಕಳದ ಗ್ರಾಮಸ್ಥರು!

ವಿದ್ಯಾರ್ಥಿನಿಯರು ವೈಯಕ್ತಿಕ ಪ್ರಶ್ನೆಗಳ ಮೂಲಕ ವೈದ್ಯಾಧಿಕಾರಿಗಳಿಂದ ಅಗತ್ಯ ಸಲಹೆ ಪಡೆದುಕೊಂಡರು.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅರುಣ ಹೆಗಡೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿ ಅಮೂಲ್ಯ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದ ಎಲ್ಲರ ಉಪಕಾರವನ್ನು ಸ್ಮರಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಆರ್.ಜಿ.ನಾಯ್ಕ . ಶ್ರೀ ಬಿ.ಪಿ.ಪಟಗಾರ. ಶ್ರೀಮತಿ ಶಾರದಾ ಜೋಶಿ ಯವರು ಜೊತೆಯಲ್ಲಿದ್ದರು. ಕಾಲೇಜಿನ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮ ಸಂಘಟಿಸಲು ಸಹಕರಿಸಿದರು.