ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್(EPF) ಸದಸ್ಯರ ಇ- ಪಾಸ್ ಬುಕ್ ಇಪಿಎಫ್ ಪೋರ್ಟಲ್ ನಲ್ಲಿ ಮತ್ತೆ ಲಭ್ಯವಾಗಿದೆ. ಕಳೆದ ಒಂದು ವಾರಕ್ಕಿಂತ ಹೆಚ್ಚು ಸಮಯದಿಂದ ಡೌನ್ ಆಗಿದ್ದ ಇ- ಪಾಸ್ ಬುಕ್ ಇಪಿಎಫ್ ಸದಸ್ಯರಿಗೆ ಲಭ್ಯವಿರಲಿಲ್ಲ.
ಇದರಿಂದಾಗಿ ಇಪಿಎಫ್ ಸದಸ್ಯರು ಪರದಾಡುವಂತಾಗಿತ್ತು. ಗುರುವಾದಿಂದ ಮತ್ತೆ ಇಪಿಎಫ್ ಪೋರ್ಟಲ್ ನಲ್ಲಿ ಇ- ಪಾಸ್ ಬುಕ್ ಲಭ್ಯವಾಗಿದೆ.
ಸದಸ್ಯರು https://passbook/login ಲಿಂಕ್ ಮಾಡುವ ಮೂಲಕ ಇ- ಪಾಸ್ ಬುಕ್ ಪಡೆದುಕೊಳ್ಳಬಹುದು. ಅಲ್ಲದೇ, ಉಮಂಗ್ ಅಪ್ಲಿಕೇಶನ್ ಮೂಲಕವೂ ಇ-ಪಾಸ್ ಬುಕ್ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.