ಕುಮಟಾ; ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಇರುತ್ತದೆ. ಆರೋಗ್ಯವಿದ್ದರೆ ನಾವು ಮಾನಸಿಕವಾಗಿ ಸದೃಢರಾಗಿರುತ್ತೇವೆ. ಆರೋಗ್ಯವೇ ಭಾಗ್ಯ ಆರೋಗ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ಸ್ವಚ್ಛತೆ ಹಾಗಾಗಿ ಪ್ರತಿಯೊಬ್ಬರೂ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ನ ಪ್ರಧಾನ ಕಚೇರಿ. ಧಾರವಾಡದ ಜನರಲ್ ಮ್ಯಾನೇಜರ್ ಸತೀಶ್ ಆರ್ ಅಭಿಪ್ರಾಯಪಟ್ಟರು. ಅವರು ಹೆಗಡೆಯ ಹೆಣ್ಣು ಮಕ್ಕಳ ಶಾಲೆಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಶೌಚಾಲಯಕ್ಕೆಂದು ತಮ್ಮ ಬ್ಯಾಂಕ್ ನಿಂದ ಮೂರು ಲಕ್ಷ ಅನುದಾನ ಬಿಡುಗಡೆ ಕಾರ್ಯಕ್ರಮದವನ್ನು ಉದ್ಘಾಟಿಸುತ್ತಾ ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯ ಪರಿಸರ ತುಂಬಾ ಚೆನ್ನಾಗಿದೆ. ಇದನ್ನು ನಾವು ತಮ್ಮ ತಂಡದೊಂದಿಗೆ ಸಮೀಕ್ಷೆ ಮಾಡಿ ಇಡೀ ಜಿಲ್ಲೆಯಲ್ಲಿ ಈ ಶಾಲೆ ಆಯ್ಕೆಯಾಗಿದ್ದು ತುಂಬಾ ಸಂತೋಷವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನ ಕಚೇರಿಯ ಮುಖ್ಯ ಮೆನೇಜರ್ ಉಲ್ಲಾಸ್ ಗುನಗ ಮಾತನಾಡುತ್ತಾ ಮಕ್ಕಳನ್ನು ನೋಡುತ್ತಿದ್ದರೆ ನಮಗೆ ನಮ್ಮ ವಿದ್ಯಾರ್ಥಿಯ ಜೀವನ ನೆನಪಾಗುತ್ತದೆ ನಾವು ಕೂಡ ಸರ್ಕಾರಿ ಶಾಲೆಯಲ್ಲಿ ಓದಿ ಇಂದು ಈ ಹಂತಕ್ಕೆ ತಲುಪಿದ್ದೇವೆ. ವಿದ್ಯಾರ್ಥಿಗಳು ಕೂಡ ಭವಿಷ್ಯದಲ್ಲಿ ಚೆನ್ನಾಗಿ ಓದಿ ಆದರೆ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ನೀಡಿ ಎನ್ನುತ್ತಾ ಭವಿಷ್ಯದಲ್ಲಿ ಉನ್ನತ ಶಿಕ್ಷಣ ಮಾಡಲು ತೊಂದರೆಯಾದರೆ ನಮ್ಮ ಬ್ಯಾಂಕಿಗೆ ಬನ್ನಿ ಎಂದು ಈ ಕಿವಿಮಾತು ಹೇಳಿದರು.
ಕೆವಿಜಿ ಬ್ಯಾಂಕ್ ನ ಪ್ರಾದೇಶಿಕ ಕಚೇರಿಯ ಮ್ಯಾನೇಜರ್ ಜಿ.ಪಿ. ಭಟ್ ಮಾತನಾಡುತ್ತಾ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ಈ ಶಾಲೆಯಲ್ಲಿ ನುರಿತ ಪ್ರಾಧ್ಯಾಪಕರು ಇದ್ದಾರೆ ಎಂಬುದನ್ನು ಇಲ್ಲಿಯ ಪರಿಸರ ನೋಡಿದಾಗ ತಿಳಿಯುತ್ತದೆ. ನಮ್ಮ ಬ್ಯಾಂಕ್ ಕೇವಲ ಲಾಭ ದತ್ತ ಗಮನಹರಿಸದೇ ಜನರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ವಿದ್ಯಾರ್ಥಿಗಳಿಗೂ ಕೂಡ ಶೈಕ್ಷಣಿಕ ಸಾಲದ ಯೋಜನೆ ಕಲ್ಪಿಸಿದೆ. ಬಂದ ಲಾಭಾಂಶದಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕೆಲಸ ಕಾರ್ಯಗಳನ್ನು ನಮ್ಮ ಬ್ಯಾಂಕ್ ಮಾಡುತ್ತಿದೆ. ಈ ಶಾಲೆಯ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣಕ್ಕೆ ಯನಾವು ಹಣ ನೀಡಿದ್ದು ತುಂಬಾ ಒಳ್ಳೆಯ ಕೆಲಸ ಮಾಡಿದ್ದೇವೆ ಎಂಬ ಸಾರ್ಥಕತೆ ನಮಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿದು ವಿದ್ಯಾರ್ಥಿಗಳ ಬಳಕೆಗೆ ಸಿಗುವಂತಾಗಲಿ ಎಂದು ಅಭಿಪ್ರಾಯಪಟ್ಟರು.
ಐಕ್ಯ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನ್ನಾಡಿ ತಮ್ಮ ಸಂಸ್ಥೆ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ನೀಡುತ್ತಿದೆ. ಈಗಾಗಲೇ ಪುರಸಭಾ ವ್ಯಾಪ್ತಿಯಲ್ಲಿ ಹಲವು ಶಾಲೆಗಳಿಗೆ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಈ ದಿನ ಕೆ.ವಿ.ಜಿ ಬ್ಯಾಂಕ್ ನವರು ಸ್ವಚ್ಛತೆ ನಮ್ಮ ಆದ್ಯತೆ ಯೋಜನೆ ಅಡಿ ಈ ಶಾಲೆಗೆ ಅನುದಾನ ನೀಡುವುದರ ಮೂಲಕ ವಿಶೇಷವಾಗಿ ಮಕ್ಕಳ ಬಗ್ಗೆ ಅತ್ಯಂತ ಕಾಳಜಿ ವಹಿಸಿದೆ ಎಂಬುದು ಅಭಿನಂದನೀಯ ಸಂಗತಿ ಎಂದರು. ಅಕೌಂಟ್ ಮ್ಯಾನೇಜರ್ ಸುಧಾ ಕಡೆಕೋಡಿ ಶುಭ ಕೋರಿದರು. ಇದೆ ಸಂದರ್ಭದಲ್ಲಿ ಶೌಚಾಲಯದ ಕಿಟ್ ವಿತರಿಸಿದರು
ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಕಾಶ್ ನಾಯ್ಕ ಬ್ಯಾಂಕ್ ನವರು ನಮ್ಮ ಶಾಲೆಯನ್ನು ಹುಡುಕಿ ಅನುದಾನ ನೀಡಿದ್ದು ನಮಗೆ ತುಂಬಾ ಖುಷಿಯಾಗಿದೆ ಈ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುತ್ತೇವೆ ಮುಂದೆ ಕೂಡ ತಮ್ಮ ಸಹಕಾರ ಇರಲಿ ಎಂದು ಅಭಿಪ್ರಾಯಪಟ್ಟರು.
ಪ್ರಾರಂಭದಲ್ಲಿ ಶಾಲೆಯ ಮುಖ್ಯಾಧ್ಯಾಪಕಿ ಮಂಗಲ ಹೆಬ್ಬಾರ್ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ಶ್ರೀಧರ್ ಗೌಡ ಕಾರ್ಯಕ್ರಮ ನಿರೂಪಿಸಿದರು ದೈಹಿಕ ಶಿಕ್ಷಕಿ ಶಾಮಲಾ ಪಟಗಾರ ವಂದಿಸಿದರು. ವೇದಿಕೆಯಲ್ಲಿ ಎಸ್ ಡಿ ಎಮ್ ಸಿ ಸದಸ್ಯರುಗಳಾದ ನಾರಾಯಣ ಕಿಣಿ, ರಾಧಾ ನಾಯ್ಕ, ಗಂಗೂ ಮುಕ್ರಿ, ವಾಸಂತಿ ನಾಯ್ಕ, ಗೀತಾ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿರಾದ ನಯನ ಪಟಗಾರ, ಭಾಗ್ಯಲಕ್ಷ್ಮಿ ನಾಯಕ್, ಲಕ್ಷ್ಮಿ ನಾಯ್ಕ ಸಹಕರಿಸಿದರು.