ಜೊಯಿಡಾ : ತಾಲೂಕಿನ ರಾಮನಗರ ಸಮೀಪ ಹುಬ್ಬಳ್ಳಿ- ಗೋವಾ ಹೆದ್ದಾರಿಯ ಸೀತಾವಾಡದಲ್ಲಿ ಭೀಕರ ಅಪಘಾತ ಒಂದು ಸಂಭವಿಸಿ, ಮೂವರು ಮಹಿಳೆಯರು ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ಪ್ರವಾಸಿಗರ ಕಾರು ಹರಿದು ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇದಾಗಿದೆ. ಖಾನಾಪುರದ ಘಾರ್ಲಿ ಮೂಲದ ಪಾರ್ವತಿ ಗಾವಡಾ ದುರ್ಗೆ ಕೋಲ್ವೇಕರ, ತುಳಸಿ ಗಾವಡಾ ಮೃತ ದುರ್ದೈವಿಗಳು. ಅಪಘಾತದಲ್ಲಿ ರಾಮನಗರದ ವಿಪಿನ್ ತಾಳ್ವೆ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ರಾಮನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

RELATED ARTICLES  ಮರಕ್ಕೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು.

ತಮಿಳುನಾಡಿನಿಂದ ಪ್ರವಾಸಕ್ಕೆಂದು ಗೋವಾಕ್ಕೆ ತೆರಳುತ್ತಿದ್ದ ತಮಿಳುನಾಡು ನೋಂದಣಿಯ ಪ್ರವಾಸಿಗರ ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ರಸ್ತೆ ಪಕ್ಕ ನಡೆದು ಹೋಗುತ್ತಿದ್ದವರ ಮೇಲೆ ಹರಿದಿದೆ. ಪ್ರಕರಣದಲ್ಲಿ ಕಾರಿನಲ್ಲಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ರಾಮನಗರ ಠಾಣಾ ಪೊಲೀಸರಿಂದ ತನಿಖೆ ಮುಂದುವರಿದಿದೆ.

RELATED ARTICLES  ಮನುಕುಲದ ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನ ಬಳಿಗೆ ನಾಸಾ ವಿಮಾನ!