ಕುಮಟಾ: ತಾಲೂಕಿನ ಮಾಸ್ತಿಹಳ್ಳ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ಕೆಎಸ್‌ಆರ್‌ಟಿಸಿ ಘಟಕಕ್ಕೆ ತೆರಳಿದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ ಅವರ ನೇತೃತ್ವದಲ್ಲಿ ಊರಿನ ಗ್ರಾಮಸ್ಥರು ಮಾಸ್ತಿಹಳ್ಳದ ಬಸ್ ತಡೆದು ಹಠಾತ್ ಪ್ರತಿಭಟನೆ ನಡೆಸಿದರು.


ತಾಲೂಕಿನ ಅಳಕೋಡ್ ಗ್ರಾಪಂ ವ್ಯಾಪ್ತಿಯ ಮಾಸ್ತಿಹಳ್ಳಕ್ಕೆ ಸಂಚರಿಸುವ ಬಸ್ ನಿಗದಿತ ಸಮುಯಕ್ಕೆ ಬಾರದೇ ಊರ ಜನರಿಗೆ ತೀರಾ ತೊಂದರೆ ಉಂಟಾಗಿದೆ. ಬೆಳಗ್ಗೆ 8 ಗಂಟೆಗೆ ಮಾಸ್ತಿಹಳ್ಳಕ್ಕೆ ಬರಬೇಕಾದ ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಹಾಗಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೇ ಕತಗಾಲ್‌ನಲ್ಲಿ ಎಲ್ಲಾ ಎಕ್ಸ್ಪ್ರೆಸ್ ಬಸ್ ಗಳಿಗೆ ನಿಲುಗಡೆ ನೀಡುವಂತೆ ಅಗತ್ಯ ಕ್ರಮ ವಹಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

RELATED ARTICLES  ವೈನ್ ಶಾಪ್ ನಲ್ಲಿ ಹೊಡೆದಾಟ : ಮೂವರು ಅರೆಸ್ಟ್..!


ಮನವಿ ಸ್ವೀಕರಿಸಿದ ಕೆಎಸ್‌ಆರ್‌ಟಿಸಿ ಘಟಕದ ಎಟಿಐ ಸಿಂಧು, ಅಗತ್ಯ ಕ್ರಮವಹಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಅಳಕೋಡ ಗ್ರಾಪಂ ಸದಸ್ಯ ದೀಪಕ ನಾಯ್ಕ, ವಕೀಲ ನಾಗರಾಜ ಹೆಗಡೆ, ಪ್ಲೆವಿನ್ ಫರ್ನಾಂಡೀಸ್, ಮಂಜುನಾಥ ಶೆಟ್ಟಿ, ರಾಮ ಶೆಟ್ಟಿ, ಅಭಿ ಗೌಡ, ಲಕ್ಷö್ಮಣ ಶೆಟ್ಟಿ, ವಾಸು ಗೌಡ, ಗೋಪಾಲ ಶೆಟ್ಟಿ, ಭಾಸ್ಕರ ಗೌಡ, ಬಲೀಯ ಗೌಡ, ಗಣಪತಿ ಗೌಡ, ವಿದ್ಯಾರ್ಥಿಗಳು ಮತ್ತು ಊರ ನಾಗರಿಕರು ಇದ್ದರು.

RELATED ARTICLES  ಪರೇಶ ಮೇಸ್ತಾ ಪ್ರಕರಣ ಮರು ತನಿಖೆಗೆ ಆಗ್ರಹಿಸುತ್ತಿರುವುದು ನಾಚಿಕೆಗೇಡಿತನದ ಪರಮಾವಧಿ