ಹೊನ್ನಾವರ : ಬಡವರನ್ನು ಅನಾಥರನ್ನು ಪ್ರೀತಿಯಿಂದ ಕಾಣುತ್ತಿದ್ದ ಕೊಡುಗೈದಾನಿ ಶ್ರೀಮತಿ ಭಾಗೀರಥಿ ಸತ್ಯನಾರಾಯಣ ಶೆಟ್ಟಿ ಕೊಂತಪಾಲ, ಕೆರೆಕೋಣ ಇವರು ವಯೋಸಹಜ ಕಾಯಿಲೆಯಿಂದ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಪರೋಪಕಾರಿಯಾದ ಇವರು, ತಮ್ಮ ಮನೆಯಲ್ಲಿ ನಡೆಯುವ ಯಕ್ಷಗಾನ, ತಾಳಮದ್ದಲೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಗಮಿಸಿದ ಎಲ್ಲರಿಗೆ ಊಟ ಉಪಚಾರ ಮಾಡುವುದರಲ್ಲಿ ಎತ್ತಿದ ಕೈ ಆಗಿದ್ದರು.

RELATED ARTICLES  ಮರಣ ಕಾಲದಲ್ಲಿ ಯಾವ ಯೋಚನೆಗಳು ಬರ ಬಹುದು?

ತನ್ನ ಪತಿ ಶ್ರೀ ಸತ್ಯನಾರಾಯಣ ಶೆಟ್ಟರ (ದೊಡ್ತಮ್ಮ ಶೆಟ್ಟಿ) ಎಲ್ಲಾ ಸಾಮಾಜಿಕ ಕೆಲಸಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಇವರು ತನ್ನ ಮಕ್ಕಳಾದ ದತ್ತಾತ್ರೇಯ ಶೆಟ್ಟಿ, ಪ್ರೇಮಾ ಶೆಟ್ಟಿ, ಗೋಪಾಲ ಶೆಟ್ಟಿ, ಸೊಸೆಯಂದಿರು ಮೊಮ್ಮಕ್ಕಳಾದ ರಾಘು, ವಿನಾಯಕ ಮುಂತಾದವರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಶಾಸಕರಾದ ಶ್ರೀ ದಿನಕರ ಕೆ ಶೆಟ್ಟಿ, ಮಾಜಿ ಶಾಸಕಿ ಶ್ರೀಮತಿ ಶಾರದಾ ಮೋಹನ ಶೆಟ್ಟಿ, ಬಿ.ವಿ.ಭಂಡಾರಿ, ರತ್ನಾಕರ ಶೆಟ್ಟಿ ಕುಮಟಾ, ಮಹೇಶ ಭಂಡಾರಿ ಕೆರೆಕೋಣ, ಕೇಶವ ಶೆಟ್ಟಿ, ಶಿಕ್ಷಕ ಅಯ್ ಆರ್ ಭಟ್ಟ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಚಿನ್ ನಾಯ್ಕ್ ,ಸದಸ್ಯರಾದ ಆಶಾ ಗಂಗಾಧರ ಮಡಿವಾಳ, ಗಣಪತಿ ಸಣ್ಣ ಶಂಭು ಭಟ್ಟ ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ..

RELATED ARTICLES  ಗೇರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ.