ಭಟ್ಕಳ : ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹೆರಾಡಿ ಕ್ರಾಸ್ ಬಳಿಯಲ್ಲಿ ಶನಿವಾರ ರಾತ್ರಿ ತನ್ನ ಸೈಕಲ್ ನಿಂದ ಇಳಿದು ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ಟಾಟಾ ನ್ಯಾನೋ ಕಾರೊಂದು ಡಿಕ್ಕಿ ಹೊಡೆದಿದ್ದು ರವಿವಾರ ಬೆಳಗಿನ ಜಾವ ಸೈಕಲ್ ಸವಾರ ಮೃತ ಪಟ್ಟ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

RELATED ARTICLES  ರಾಘವೇಶ್ವರ ಶ್ರೀ ಆರೋಪ ಮುಕ್ತ : ಹೈಕೋರ್ಟ್ ಮಹತ್ವದ ತೀರ್ಪು.

ಮೃತನನ್ನು ಸುಬ್ರಾಯ ತಂದೆ ತಿಮ್ಮಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಈತನು ಬಸ್ತಿಯಲ್ಲಿ ಜ್ಯೂಸ್ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು ರಾತ್ರಿ ತನ್ನ ಸೈಕಲ್ ಮೇಲೆ ಮನೆಗೆ ಬರುತ್ತಿರುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿರುವ ವೇಳೆಯಲ್ಲಿ ಅತಿವೇಗದಿಂದ ಬಂದ ನ್ಯಾನೋ ಕಾರಿನ ಚಾಲಕ ಮುರ್ಡೇಶ್ವರ ನ್ಯಾಶನಲ್ ಕಾಲೋನಿಯ ಅಮ್ಮದ್ ಅಲಿ ದೊಣ್ಣ ಇವರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಸುಬ್ರಾಯ ನಾಯ್ಕ ಇವರು ಕೆಳಕ್ಕೆ ಬಿದ್ದು ತಳೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು ಅಲ್ಲಿಂದ ಭಟ್ಕಳ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ರವಿವಾರ ಬೆಳಗಿನ ಜಾವ ಮೃತರಾಗಿದ್ದಾರೆ ಎಂದು ಆತನ ಪುತ್ರ ರಾಘವೇಂದ್ರ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.

RELATED ARTICLES  ದಂತ ತಪಾಸಣಾ ಶಿಬಿರ ಸಂಪನ್ನ.