ಹೊನ್ನಾವರ: ತಾಲೂಕಿನ ಕೆಳಗಿನ ಇಡಗುಂಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಳ್ಕೋಡ್ ಸಮೀಪ ಕಡೆವೆಯೊಂದು ಆಕಸ್ಮಿಕವಾಗಿ ತೋಟದ ಮಧ್ಯೆ ಇರುವ ಬಾವಿಯಲ್ಲಿ ಬಿದ್ದಿತ್ತು. ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಿಮಿಸಿದ ಸಿಬ್ಬಂದಿಗಳು ಆಳದ ಬಾವಿಯಲ್ಲಿ ಬಿದ್ದಿರುವುದರಿಂದ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದಾಗ, ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ತಮ್ಮಲ್ಲಿರುವ ಸಲಕರಣೆ ಹಾಗೂ ಸಾರ್ವಜನಿಕರ ಸಹಕಾರದ ಮೇರೆಗೆ ಬಾವಿಯಲ್ಲಿ ಇಳಿದು ಹಗ್ಗ ಕಟ್ಟಿ ಸುರಕ್ಷಿತವಾಗಿ ಕಡವೆಯನ್ನ ಮೇಲಕ್ಕೆ ಎತ್ತಿದ್ದರು. ನಂತರ ವಾಹನದ ಮೂಲಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಡವೆಯನ್ನು ಕೊಂಡೊಯ್ದು ನಾಡಿನಿಂದ ಕಾಡಿಗೆ ಬಿಟ್ಟರು. ಸಾರ್ವಜನಿಕರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಸಹಕಾರಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.