ಚಿತ್ರ : ಅಶ್ವಿನಿ ಸ್ಟುಡಿಯೋ ಬದಿಯಡ್ಕ

ಬದಿಯಡ್ಕ : ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮಿಸೆಲ್ಸ್ & ರುಬೆಲ್ಲಾ (ಎಂ.ಆರ್.)ಪ್ರತಿರೋಧ ಚುಚ್ಚುಮದ್ದಿನ ಕುರಿತು ಪಾಲಕರಿಗೆ ಅರಿವು ಮೂಡಿಸಲು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶುಕ್ರವಾರ ತರಗತಿಯನ್ನು ನಡೆಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಲ್ತ್ ಇನ್ಸ್‍ಪೆಕ್ಟರ್ ಸಾಬು ಜೋರ್ಜ್ ತರಗತಿಯಲ್ಲಿ ಮಾಹಿತಿಯನ್ನು ನೀಡುತ್ತಾ ಚುಚ್ಚುಮದ್ದಿನ ಕುರಿತು ಜನರಿಗೆ ಯಾವುದೇ ಆತಂಕ ಬೇಡ. ಇದನ್ನು ನೀಡುವುದರಿಂದ ಮಕ್ಕಳಲ್ಲಿ ರೋಗಪ್ರತಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಮಾರಕ ರೋಗಗಳನ್ನು ತಡೆಗಟ್ಟುವಲ್ಲಿ ಈ ಚುಚ್ಚುಮದ್ದು ಬಹಳ ಉಪಯುಕ್ತಕಾರಿ. ರೋಗಬಂದಮೇಲೆ ವಾಸಿಮಾಡುವುದಕ್ಕಿಂತ ರೋಗ ಬರದಂತೆ ತಡೆಗಟ್ಟುವ ಉದ್ದೇಶದಿಂದ ಸರಕಾರ ಎಂ.ಆರ್. ಚುಚ್ಚುಮದ್ದನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 9 ತಿಂಗಳಿಂದ 15 ವರ್ಷದ ಎಲ್ಲಾ ಮಕ್ಕಳಿಗೆ ಈ ಚುಚ್ಚುಮದ್ದನ್ನು ಖಡ್ಡಾಯವಾಗಿ ನೀಡಲೇಬೇಕು. ಚುಚ್ಚುಮದ್ದಿನಿಂದಾಗಿ ಈ ತನಕ ಯಾವುದೇ ದುಷ್ಪರಿಣಾಮಗಳು ಕಂಡುಬಂದಿಲ್ಲ. ಪ್ರಸಕ್ತ ವಿದ್ಯಮಾನದಲ್ಲಿ ಹಲವಾರು ದಿನೇ ದಿನೇ ಹೊಸ ಹೊಸ ರೋಗಗಳ ಹೆಸರುಗಳನ್ನು ಕೇಳುತ್ತಿದ್ದೇವೆ. ಆಧುನಿಕ ತಂತ್ರಜ್ಞಾನವು ಮುಂದುವರಿಯುತ್ತಲೇ ಇದೆ. ವಿಜ್ಞಾನದಲ್ಲಿ ಹೊಸ ಹೊಸ ಪ್ರಯೋಗಗಳು ನಿರಂತರವಾಗಿ ಜರಗುತ್ತಿದೆ. ಆದರೂ ಕೆಲವೆಡೆಗಳಲ್ಲಿ ಆರೋಗ್ಯದ ಕಡೆಗೆ ಇನ್ನೂ ಜಾಗೃತಿ ಮೂಡಿಲ್ಲ. ಇಂತಹ ತರಗತಿಗಳಿಂದ ಮುಕ್ತ ಸಂವಾದಗಳಿಂದ ಮಾತ್ರವೇ ಜನರಲ್ಲಿರುವ ಆತಂಕವನ್ನು ನಿವಾರಿಸಬಹುದು. ಆರೋಗ್ಯವೇ ಭಾಗ್ಯವೆಂಬ ಪ್ರಬಂಧಕ್ಕೆ ಸಹಕರಿಸುವ ಪಾಲಕರು ಮಾಹಿತಿ ಶಿಬಿರಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಆದರೆ ಈ ಶಾಲೆಯಲ್ಲಿ ಪಾಲಕರು ಆಸಕ್ತಿಯಿಂದ ಭಾಗವಹಿಸಿರುವುದು ಸಂತಸವನ್ನು ನೀಡಿದೆ ಎಂದರು.

RELATED ARTICLES  ರಾಜ್ಯೋತ್ಸವ ಪ್ರಶಸ್ತಿ ಯಾಜಿಯವರ ಕಲಾ ಪ್ರತಿಭೆಗೆ ಸಂದ ಗೌರವವಾಗಿದೆ!

ಈ ಸಂದರ್ಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಪುಟಾಣಿ ಮಕ್ಕಳ ಪಾಲಕರೂ ಜೊತೆಗೂಡಿ ಬರಬಹುದು. ಇನ್ನೂ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಅಧಿಕೃತರೊಡನೆ ಮಾತನಾಡಿಕೊಳ್ಳಬಹುದು ಎಂದರು. ಕೋಶಾಧಿಕಾರಿ ರಾಜಗೋಪಾಲ ಚುಳ್ಳಿಕ್ಕಾನ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದರು. ಹೆಚ್ಚಿನ ಎಲ್ಲಾ ಪಾಲಕರೂ ಹಾಜರಿದ್ದು ತಮ್ಮ ಸಂಶಯಗಳನ್ನು ಪ್ರಶ್ನೋತ್ತರ ಸಂದರ್ಭದಲ್ಲಿ ಪರಿಹರಿಸಿಕೊಂಡರು.

RELATED ARTICLES  ಲಾಕ್ ಡೌನ್ ನಂತರ ಅನ್ ಲಾಕ್ ಪ್ರಕ್ರಿಯೆ ಹೇಗೆ?