ಸುಗಮ ಸಂಗೀತದ ಮೇರು ಗಾಯಕ, ಖ್ಯಾತ ಗಮಕ ಕಲಾವಿದ, ನಿವೃತ್ತಾ ಅಧ್ಯಾಪಕ ಚಂದ್ರಶೇಖರ್ ಕೆದಿಲಾಯ ಇಂದು (ಜನವರಿ 24) ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 73 ವರ್ಷದ ಚಂದ್ರಶೇಖರ ಕೆದಿಲಾಯ ಬ್ರಹ್ಮಾವರದ ಕಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಮೃತರು ಪತ್ನಿ, ಇಬ್ಬರೂ ಪುತ್ರಿಯರು ಸೇರಿದಂತೆ ಬಂಧು ಬಳಗವನ್ನು ಆಗಲಿದ್ದಾರೆ.

ಎಚ್. ಚಂದ್ರಶೇಖರ್ ಕೆದಿಲಾಯ 1950ರ ಏಪ್ರಿಲ್ 23ರಂದು ಉಡುಪಿ ಜಿಲ್ಲೆಯ ಹೆಸ್ಕುತ್ತೂರು ಗ್ರಾಮದ ಹಾರ್ಯಾಡಿಯಲ್ಲಿ ಜನಿಸಿದರು. ತಂದೆ ಗಣಪಯ್ಯ ಕೆದಿಲಾಯ ಮತ್ತು ತಾಯಿ ಕಮಲಮ್ಮ. ಎಚ್. ಚಂದ್ರಶೇಖರ್ ಕೆದಿಲಾಯ ಅವರು ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಕನ್ನಡ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಜೊತೆಗೆ ಚಂದ್ರಶೇಖರ್ ಕೆದಿಲಾಯ ಆಕಾಶವಾಣಿಯಲ್ಲೂ ಕೆಲಸ ಮಾಡಿದ್ದಾರೆ. ಆಕಾಶವಾಣಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು.

RELATED ARTICLES  ಕರ್ಕಿ ಪಿ. ವಿ. ಹಾಸ್ಯಗಾರ ಪ್ರಶಸ್ತಿಗೆ ಡಾ. ಕೆ. ಎಂ. ರಾಘವ ನಂಬಿಯಾರ ಆಯ್ಕೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ (1992-93), ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ (2008) ಕೂಡ ಲಭಿಸಿತ್ತು. ಚಂದ್ರಶೇಖರ್ ನಿಧನಕ್ಕೆ ಅನೇಕರು ಸಂಪಾತ ಸೂಚಿಸುತ್ತಿದ್ದಾರೆ. ಅಭಿಮಾನಿಗಳು ಮತ್ತು ಗಣ್ಯರು ಸಂತಾಪ ಸೂಚಿಸಿ ಪೋಸ್ಟ್ ಮಾಡುತ್ತಿದ್ದಾರೆ.

ಸಭಾಪತಿ ಕಾಗೇರಿ ಸಂತಾಪ

ಸುಗಮ ಸಂಗೀತದ ಮೇರು ಗಾಯಕ, ಖ್ಯಾತ ಗಮಕ ಕಲಾವಿದ, ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಚಂದ್ರಶೇಖರ ಕೆದ್ಲಾಯ್ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು. ತಮ್ಮ ಕಂಚಿನ ಕಂಠದ ಗಾಯನದ ಮೂಲಕ ಅನೇಕ ಕಲಾಸಕ್ತರ ಪ್ರೀತಿಯನ್ನು ಸಂಪಾದಿಸಿದ್ದ ಶ್ರೀಯುತರು ಆಕಾಶವಾಣಿ ಕಲಾವಿದರಾಗಿಯೂ ಸೇವೆಸಲ್ಲಿಸಿದ್ದರು. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಸಹೃದಯಿಗಳಾಗಿದ್ದರು.

RELATED ARTICLES  ಗೌರಿ ವ್ರತ: ಮಹಿಳೆಯರಿಂದ ಬಾಗಿನ ಅರ್ಪಣೆ


ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ. ಅವರ ಕುಟುಂಬ ವರ್ಗದವರಿಗೆ ಹಾಗೂ ಅವರ ಅಭಿಮಾನಿ ಬಳಗದವರಿಗೆ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ.