ಯಲ್ಲಾಪುರ : ಸಂಗೀತ, ಸಾಹಿತ್ಯ, ನಾಟಕ, ಕಲೆ ಇವು ಮನುಷ್ಯನನ್ನು ಸಂಸ್ಕಾರವಂತರನ್ನಾಗಿಸುತ್ತದೆ. ಇವುಗಳಲ್ಲಿ ಆಸಕ್ತಿ ಇಲ್ಲದವರು ಪಶುವಿಗಿಂತ ಕನಿಷ್ಟ ಎಂಬ ವಾಕ್ಯದಂತೆ ಸಂಗೀತ ಮನುಷ್ಯನ ಶ್ರೇಷ್ಟತೆಯನ್ನು ಬೆಳಗುತ್ತಿದ್ದರೆ ಸಾಹಿತ್ಯಾಧ್ಯಯನ ಮರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಮಲೆನಾಡು ಕೃಷಿ ಗ್ರಾಮಿಣಾಭಿವೃದ್ಧಿ ಸಹಕಾರಿ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಹೇಳಿದರು. ಅವರು ಜನವರಿ.೨೩ ರಂದು ವಿಶ್ವದರ್ಶನದ ಗಂಗಾಧರೇಂದ್ರ ಸರಸ್ವತೀ ಸಭಾಂಗಣದಲ್ಲಿ ದಾಂಡೇಲಿಯ ಮಾಸ್ಕೇರಿ ಸಾಹಿತ್ಯಾರಾಧನ ವೇದಿಕೆ ಮತ್ತು ಮಂತ್ರಾಲಯದ ಪೂಜ್ಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಘೋಷಿಸಿ ಪೂಜ್ಯ ಶ್ರೀ ವಿಭೂದೇಂದ್ರ ತೀರ್ಥರ ಅಮೃತ ಹಸ್ತದಿಂದ ನೀಡಲಾದ ಶ್ರೀ ಶ್ರೀಗಂಧ ಹಾರ ಪ್ರಶಸ್ತಿ ಮತ್ತು ಶ್ರೀಗುರು ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಾಹಿತ್ಯ, ಸಂಗೀತಕ್ಕೆ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡುವಂತಹ ಶಕ್ತಿ ಇದೆ. ಇದು ನಮ್ಮ ಭಾರತಿಯ ಪರಂಪರೆಯಲ್ಲಿ ಸಾವಿರಾರು ವರ್ಷಗಳಿಂದ ನಡೆದುಬಂದಿದೆ. ಮುಂದಿನ ಪೀಳಿಗೆಯ ಯುವ ಜನಾಂಗಕ್ಕೆ ಇಂತಹ ಶ್ರೇಷ್ಟ ವ್ಯಕ್ತಿತ್ವ ನಿರ್ಮಾಣದ ಚಿಂತನೆಯನ್ನು ತಲುಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಆ ದೃಷ್ಟಿಯಿಂದ ಸಾಧಕರನ್ನು ಗುರುತಿಸಿ ಮಾಸ್ಕೇರಿ ನಾಯಕರವರು ಪ್ರಶಸ್ತಿ ನೀಡುತ್ತಿರುವುದು ಕೂಡ ಸಮಾಜದಲ್ಲಿ ಆದರ್ಶ ಪ್ರಾಯವಾಗಿದೆ. ನಮ್ಮ ಹಿರಿಯರ ಮಾರ್ಗದರ್ಶನದಿಂದಲೇ ನಾನು ಕೂಡ ಈ ಕ್ಷೇತ್ರದ ಆಸಕ್ತಿ ಪಡೆಯುವಂತಾಗಿದೆ ಎಂದರು.


ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಮಾಡುತ್ತಿರುವುದನ್ನು ಕಂಡಿದ್ದೆವೆ. ಸಮಾಜ ಅಂತವರನ್ನು ಗುರುತಿಸಿ ಗೌರವಿಸುವುದು ಯುವ ಜನಾಂಕ್ಕೆ ಪ್ರೇರಣೆಯಾಗಲು ಸಾಧ್ಯ. ಶ್ರೀಗಂಧ ಹಾರ ಪ್ರಶಸ್ತಿಗೆ ಭಾಜನರಾದ ಹಿರಿಯ ಕವಿ ವನರಾಗ ಶರ್ಮಾ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಂತೆಯೇ ಜಿಲ್ಲೆಯ ನವರತ್ನದಂತಿದ್ದ ಸಾಧಕರಿಗೆ ಶ್ರೀಗುರು ಪ್ರಶಸ್ತಿ ನೀಡಿರುವುದು ಕೂಡ ವಿಶೇಷವಾದುದು. ಈ ಎಲ್ಲ ಸಾಧಕರು ಮುಂದಿನ ದಿನಗಳಲ್ಲಿ ತಮ್ಮ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದರು.

RELATED ARTICLES  24ರಂದು ಭಟ್ಕಳದಲ್ಲಿ ಹೃದಯ ತಪಾಸಣಾ ಉಚಿತ ಶಿಬಿರ


ಮಾಸ್ಕೇರಿ ಸಾಹಿತ್ಯಾರಾಧನ ಪ್ರತಿಷ್ಟಾನದ ಅಧ್ಯಕ್ಷ ಮಾಸ್ಕೇರಿ ಎಂ.ಕೆ.ನಾಯಕ ಮಾತನಾಡಿ, ಮನುಷ್ಯತ್ವ ಉಳ್ಳವರು ಮಾತ್ರ ಮನುಷ್ಯರಾಗಲು ಸಾಧ್ಯ. ಅಂತವರಲ್ಲಿ ಹಣ ಇಲ್ಲದಿದ್ದರು. ಮಾನವಿಯ ಶ್ರೀಮಂತಿಕೆ ಇರುತ್ತದೆ. ಸಾಹಿತ್ಯದಲ್ಲಿ ಅಧ್ಯಯನ ಇದ್ದಾಗ ಮಾತ್ರ ಉತ್ತಮ ಸಾಹಿತ್ಯ ಸಮಾಜಕ್ಕೆ ದೊರೆಯುತ್ತದೆ. ಆ ನಿಟ್ಟಿನಲ್ಲಿ ವನರಾಗ ಶರ್ಮಾ ರಾಮಾಯಣವನ್ನು ಷಟ್ಪದಿಯಲ್ಲಿ ಬರೆದು ಮಹಾಕವಿ ಎಂದು ಗುರುತಿಸಲ್ಪಟ್ಟಿದ್ದಾರೆ. ಈ ಪ್ರಶಸ್ತಿಯನ್ನು ಮಂತ್ರಾಲಯದಲ್ಲೇ ನೀಡಬೇಕಿತ್ತು. ದೂರದ ಊರಿಗೆ ಹೋಗಲಾಗದ ಪ್ರಯುಕ್ತ ಯಲ್ಲಾಪುರದಲ್ಲೇ ಪ್ರಶಸ್ತಿ ನೀಡಿದ್ದೆವೆ. ಯಾವ ವ್ಯಕ್ತಿ ಸಮಾಜದಲ್ಲಿ ಅನ್ಯಾಯವನ್ನು ಪ್ರತಿಭಟಿಸುವ ಸಾಮರ್ಥ ಬೆಳೆಸಿಕೊಳ್ಳುತ್ತಾನೊ ಒಳ್ಳೆಯದನ್ನು ಬೆಂಬಲಿಸುತ್ತಾರೋ ಆಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದ ಅವರು, ನಾವು ಹಲವಾರು ವರ್ಷಗಳಿಂದ ಈ ಪ್ರಶಸ್ತಿಯನ್ನು ನಾಡಿನ ಶ್ರೇಷ್ಟ ಸಾಧಕರಿಗೆ ನೀಡುತ್ತಿದ್ದೆವೆ. ಅಂತೆಯೇ ಈ ವರ್ಷವೂ ಶ್ರೀಗುರು ಪ್ರಶಸ್ತಿಯನ್ನು ಒಂಬತ್ತು ಸಾಧಕರಿಗೆ ನೀಡಿದ ಸಮಾಧಾನ ನನ್ನದು ಎಂದರು.


ವಿಶ್ರಾಂತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿ, ವನರಾಗ ಶರ್ಮಾ ಸಾಹಿತ್ಯ ಕ್ಷೇತ್ರದಲ್ಲಿ ದ್ರುವ ತಾರೆಯಾಗಿದ್ದಾರೆ. ಕನ್ನಡ, ಹಿಂದಿ, ಸಂಸ್ಕೃತ ಭಾಷೆಯಲ್ಲಿ ಪರಿಪೂರ್ಣ ಅಧ್ಯಯನ ಶಾಲಿಯಾಗಿದ್ದಾರೆ. ೬೨ ವರ್ಷದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅವರು ೪೦ ಕ್ಕು ಹೆಚ್ಚು ಗ್ರಂಥ ಸಮಾಜಕ್ಕೆ ನೀಡಿದ್ದಾರೆ. ಅಂತಹ ಸಾಧಕರಿಗೆ ಶ್ರೀಗುರು ಪ್ರಶಸ್ತಿ ಲಭಿಸಿರುವುದು ಜಿಲ್ಲೆಗೆ ಸಂದ ಗೌರವ. ಅಲ್ಲದೇ ಶ್ರೀಗುರು ಪ್ರಶಸ್ತಿ ಪುರಸ್ಕೃತರಾದ ಗಣಪತಿ ಕಂಚಿಪಾಲ್, ಡಾ.ಡಿ.ಕೆ.ಗಾಂವ್ಕರ್, ಮುಕ್ತಾ ಶಂಕರ, ಶಿವಲೀಲಾ ಹುಣಸಗಿ, ಕವಿತಾ ಹೆಬ್ಬಾರ, ವಿಶ್ವನಾಥ ಭಾಗ್ವತ, ಪ್ರವಿಣ ನಾಯಕ, ಸುಧಾಕರ ನಾಯಕ, ಉಮೇಶ ಮಂಡಳಿ ಇವರುಗಳು ಕೂಡಾ ತಮ್ಮ ಕ್ಷೇತ್ರದ ಜೊತೆ ವಿವಿಧ ಕ್ಷೇತ್ರಗಳಲ್ಲಿಯೂ ಸಾಧನೆಮಾಡಿ ಗುರುತಿಸಿಕೊಂಡಿದ್ದಾರೆ ಎಂದರು.

RELATED ARTICLES  'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಕುಮಟಾ ನೆಲ್ಲಿಕೇರಿಯ ಪುಟ್ಟ ಬಾಲಕ ಸಂಪ್ರೀತ್ ನಾಯ್ಕ


ಸನ್ಮಾನಿತರ ಪರವಾಗಿ ಶ್ರೀಗಂಧಹಾರ ಪ್ರಶಸ್ತಿ ಪುರಸ್ಕೃತ ವನರಾಗ ಶರ್ಮಾ ಮಾತನಾಡಿ, ಮಾಸ್ಕೇರಿ ಸಂಸ್ಥೆ ನೀಡಿದ ಸನ್ಮಾನ ಪ್ರಶಸ್ತಿ ಸನ್ಮಾನ ಇದು ಸಾಹಿತ್ಯ ಕ್ಷೇತ್ರಕ್ಕೆ ಸಂದ ಗೌರವ ಎಂದು ಭಾವಿಸಿದ್ದೆನೆ. ನಾವು ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೇ ಸಮಾಜಮುಖಿಯಾಗಿ ಕೆಲಸ ಮಾಡುವ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಆ ದೃಷ್ಟಿಯಿಂದ ಇಂತಹ ಸನ್ಮಾನ ಪುರಸ್ಕಾರಗಳು ಇನ್ನು ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡುತ್ತದೆ ಎಂದರು.


ಶ್ರೀಗುರು ಪ್ರಶಸ್ತಿ ಪುರಸ್ಕೃತರಾದ ಡಾ.ಡಿ.ಕೆ.ಗಾಂವ್ಕರ್, ಪ್ರವಿಣ ನಾಯಕ ತಮ್ಮ ಅಭಿಪ್ರಾಯ ಹಂಚಿಕೊAಡರು. ಈ ಸಂದರ್ಭದಲ್ಲಿ ದಾಂಡೇಲಿಯ ಯುವ ಕೊಳಲುವಾದಕ ಜಯತ್ ಹಂಸದ್ವನಿ ಮತ್ತು ಯಮನ್ ರಾಗದಲ್ಲಿ ಕೊಳಲುವಾದನ ನುಡಿಸಿ ಪ್ರಶಂಸೆಗೆ ಪಾತ್ರರಾಗಿ ಅಭಿನಂದಿಸಲ್ಪಟ್ಟರು.


ಶಿಕ್ಷಕಿ ಪಲ್ಲವಿ ಕೋಮಾರ ಸಂಗಡಿಗರಿAದ ಪ್ರಾರ್ಥನೆ, ವಿಶ್ವದರ್ಶನ ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ಟ ಪ್ರಾರ್ಥಿಸಿದರು. ಪತ್ರಕರ್ತರಾದ ಕೇಬಲ್ ನಾಗೇಶ ನಿರ್ವಹಿಸಿದರು. ಶಂಕರ ಭಟ್ಟ ತಾರೀಮಕ್ಕಿ ವಂದಿಸಿದರು.