ನವದೆಹಲಿ: ನೋಟು ನಿಷೇಧದ ಬಳಿಕ ದೇಶಾದ್ಯಂತ ಅಪಾರ ಪ್ರಮಾಣದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಈ ಬಗ್ಗೆ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಿತ್ತ ಸಚಿವಾಲಯ, ನೋಟ ನಿಷೇಧದ ಬಳಿಕ ಸುಮಾರು 5800ಕ್ಕೂ ಅಧಿಕ ನಾಮ್ ಕೇ ವಾಸ್ತೆ ಸಂಸ್ಥೆಗಳ ಮೂಲಕ ಸುಮಾರು 4,574 ಕೋಟಿ ಹಣ ವಿವಿಧ ಬ್ಯಾಂಕುಗಳಿಗೆ ಜಮಾವಣೆಯಾಗಿದ್ದು, ಬಳಿಕ 4,552 ಕೋಟಿ ರು.ಗಳನ್ನು ವಿತ್ ಡ್ರಾ ಮಾಡಲಾಗಿದೆ. ನೋಟು ನಿಷೇಧಕ್ಕೂ ಮೊದಲು ಈ ಕಂಪನಿಗಳ ಖಾತೆಗಳಲ್ಲಿ ಶೂನ್ಯ ಠೇವಣಿ ನಿರ್ವಹಿಸಿದ್ದ ದಾಖಲೆಗಳು ಪತ್ತೆಯಾಗಿದ್ದು, ನೋಟು ನಿಷೇಧವಾಗುತ್ತಿದ್ದಂತೆಯೇ ಈ ಕಂಪನಿಗಳ ಖಾತೆಗಳಲ್ಲಿ ನೂರಾರು ಕೋಟಿ ಹಣ ಜಮೆಯಾಗಿದ್ದು ಹೇಗೆ ಎಂಬ ವಿಚಾರ ಶಂಕೆ ಮೂಡಿಸುತ್ತಿದೆ.

RELATED ARTICLES  ವ್ಯಕ್ತಿಯನ್ನು ಶಕ್ತಿಯಾಗಿಸೋಣ" ವಿಶೇಷ ಶಿಬಿರ

ಇದೇ ಕಾರಣಕ್ಕಾಗಿ ಅಕ್ರಮ ಹಣ ವರ್ಗಾವಣೆಯಾಗಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಈ ಖಾತೆಗಳಿಗೆ ಸಂಬಂಧಿಸಿದಂತೆ ಒಟ್ಟು 13 ವಿವಿಧ ಬ್ಯಾಂಕ್ ಗಳಿಂದ ಮಾಹಿತಿ ಪಡೆಯಲಾಗಿದೆ. ಬ್ಯಾಂಕ್ ಗಳು ನೀಡಿರುವ ಮಾಹಿತಿಯಂತೆ ನೋಟು ನಿಷೇಧದ ಬಳಿಕ ನಡೆದ ಸುಮಾರು 2,09,032 ಕೋಟಿ ವಹಿವಾಟುಗಳು ಶಂಕಾಸ್ಪದವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಕಳೆದ ವಾರವಷ್ಟೇ ಮೋದಿ ಸರ್ಕಾರ, 4.5 ಲಕ್ಷ ಶೆಲ್ ಕಂಪನಿಗಳನ್ನು ಗುರುತಿಸಿ (ಹೆಸರಿಗಷ್ಟೇ ಆರಂಭವಾಗಿರುವ ಕಂಪನಿಗಳು) ಈ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ನಿರ್ದೇಶಕರಿಗೆ ಕಠಿಣ ಸಂದೇಶ ರವಾನಿಸಿತ್ತು.ಕೇವಲ ಹೆಸರಿಗಷ್ಟೇ ಕಾರ್ಯನಿರ್ವಹಿಸುತ್ತಿರುವ 2,17,239 ಕಂಪನಿಗಳನ್ನು ಈಗಾಗಲೇ ದಾಖಲೆಗಾಳಿಂದ ತೆಗೆದು ಹಾಕಲಾಗಿದ್ದು, ಅಂತಹ ಸಂಸ್ಥೆಗಳು ಹಾಗೂ ಅವುಗಳೊಂದಿಗೆ ನಂಟು ಹೊಂದಿದ್ದ ನಿರ್ದೇಶಕರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಸ್ಪಷ್ಟಪಡಿಸಿತ್ತು. ಅಂತೆಯೇ ಸೆ.22 ರ ವರೆಗೆ 3,19,637 ನಿರ್ದೇಶಕರನ್ನು ಗುರುತಿಸಲಾಗಿದ್ದು, ಕಂಪನಿ ಕಾಯ್ದೆ 2013 ರ ಸೆಕ್ಷನ್ 164 (2) (a) ಪ್ರಕಾರ ಅನರ್ಹಗೊಳಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಸರ್ಕಾರ ಎಚ್ಚರಿಕೆ ನೀಡಿತ್ತು.

RELATED ARTICLES  ಮಾಜಿ ಶಾಸಕ ದಿ. ಮೋಹನ್ ಶೆಟ್ಟಿಯವರ ಜನ್ಮದಿನ ಹಿನ್ನೆಲೆ ಡಯಾಲಿಸಿಸ್ ಕೇಂದ್ರಕ್ಕೆ 50,000 ರೂ ದೇಣಿಗೆ