ಹೊನ್ನಾವರ: ತಾಲೂಕಿನ ಗುಣವಂತೆಯಲ್ಲಿ ಫೆಬ್ರವರಿ 3ರಿಂದ 7ರ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ನಡೆಯಲಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನಾಟ್ಯೋತ್ಸವದ ಮೊದಲ ದಿನ ಫೆಬ್ರವರಿ 3 ರಂದು ಸಂಜೆ 4.30ಕ್ಕೆ ಚಿತ್ರಾಪುರ ಮಠಾಧೀಶ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆ ಸಚಿವ ವಿ. ಸುನೀಲಕುಮಾರ ಉದ್ಘಾಟಿಸುವರು. ಚಲನಚಿತ್ರ ಹಾಗೂ ರಂಗಭೂಮಿ ಹಿರಿಯ ಕಲಾವಿದ ಅನಂತ ನಾಗ್ ಅವರಿಗೆ “ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2021″ ಪ್ರದಾನ ಮಾಡಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಪ್ರಶಸ್ತಿ ಪ್ರದಾನ ಮಾಡುವರು. ಮಂಡಳಿ ವತಿಯಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಲಾವಿದ ಡಾ.ಎಂ. ಪ್ರಭಾಕರ ಜೋಶಿ ಇವರಿಗೆ ವಿಶೇಷ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.

RELATED ARTICLES  ಭೀಕರ ಅಪಘಾತ - ಜೀವನ್ಮರಣ ಸ್ಥಿತಿಯಲ್ಲಿ ಸವಾರರು.

ನಟ ಅನಂತ ಭಟ್ಟ ಹುಳಗೋಳ, ಬರಹಗಾರ ಎಂ.ಕೆ. ಭಾಸ್ಕರ ರಾವ್, ಶಾಸಕ ಸುನೀಲ ನಾಯ್ಕ, ಪತ್ರಕರ್ತ ಬಿ. ಗಣಪತಿ, ಉಡುಪಿಯ ಶಾಸಕ ರಘುಪತಿ ಭಟ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ಕುಮಾರ ಕೊಡಗಿ, ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಬರಹಗಾರ ರೋಹಿತ್ ಚಕ್ರತೀರ್ಥ, ಸಾಂಸ್ಕೃತಿಕ ಚಿಂತಕ ನಾರಾಯಣ ಯಾಜಿ, ಮಾಜಿ ಶಾಸಕ ಮಂಕಾಳ ವೈದ್ಯ, ಸಾಹಿತಿ ರೋಹಿದಾಸ ಮತ್ತಿತರರು ಈ ಐದು ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಯಕ್ಷಗಾನ ಕಲಾವಿದ ತಿಮ್ಮಪ್ಪ ಹೆಗಡೆ ಶಿರಳಗಿ ಇವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರಧಾನ,ಯಕ್ಷರಂಗ ಮಾಸಪತ್ರಿಕೆ, ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಮತ್ತಿತರರಿಗೆ ಸನ್ಮಾನ, ವೆಂಕಟ್ರಮಣ ಹೆಗಡೆ ಇವರಿಗೆ ಶ್ರೀಮಯ ಕಲಾ ಪೋಷಕ ಪ್ರಶಸ್ತಿ ಪ್ರಧಾನ, ಗುಣವಂತೆಯ ಭಂಡಾರಿ ಮಿತ್ರವೃಂದದವರಿAದ ಪಂಚವಾದ್ಯ ಸಮ್ಮೇಳ- ಮಂಗಳವಾದ್ಯ, ಕೇರಳ ತಂಡದ ಕಿರಾತಾರ್ಜುನೀಯ ಕಥಕ್ಕಳಿ, ಓಡಿಸ್ಸಿ ನೃತ್ಯ, ಲಯಲಾವಣ್ಯ, ಶ್ರೀ ಕೃಷ್ಣ ಕಾರುಣ್ಯ ಯಕ್ಷಗಾನ, ನಾಟಕ, ಗಝಲ್ ಗಾಯನ, ನಾಟ್ಯ ಪ್ರಕಾರದ ರೂಪಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಬಾನ್ಸುರಿ ವಾದನ, ತಬಲ ವಾದನ, ಶಾಲಾ ಮಕ್ಕಳಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತಿತರ ಕಾರ್ಯಕ್ರಮಗಳು ಈ ದಿನಗಳಲ್ಲಿ ನಡೆಯಲಿವೆ ಎಂದು ತಿಳಿಸಿದರು.

RELATED ARTICLES  ಅಪಘಾತದಲ್ಲಿ ಗಾಯಗೊಂಡಿದ್ದ ಗಣಪತಿ ಪಟಗಾರ ಸಾವು

ಫೆಬ್ರವರಿ 7 ರಂದು ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಅಧ್ಯಕ್ಷತೆ ವಹಿಸುವರು. ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀ ನಾರಾಯಣ ಕಾಶಿ ಮಾತನಾಡಿ ವಿವಿಧ ಕಲಾ ಪ್ರಕಾರ ಪ್ರದರ್ಶನದ ಜೊತೆ ಅನೇಕ ಸಾಧಕರನ್ನು ಸನ್ಮಾನಿಸುವ ಕಾರ್ಯ ರಾಷ್ಟ್ರೀಯ ನಾಟ್ಯೊತ್ಸವದ ಮೂಲಕ ನಡೆಯುತ್ತಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕೆ.ಜಿ. ಹೆಗಡೆ ಉಪಸ್ಥಿತರಿದ್ದರು