ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥಾಪಕ ಶ್ರೀ ರವಿ ಶಂಕರ್ ಗುರೂಜಿ ಇದ್ದ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಈರೋಡ್’ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಚೆನ್ನೈ: ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥಾಪಕ ಶ್ರೀ ರವಿ ಶಂಕರ್ ಗುರೂಜಿ ಇದ್ದ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಈರೋಡ್’ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ರವಿ ಶಂಕರ್ ಗುರೂಜಿ ಹಾಗೂ ಇತರ ಮೂವರಿದ್ದ ಹೆಲಿಕಾಪ್ಟರ್ ಈರೋಡ್ ಜಿಲ್ಲೆಯ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಬುಡಕಟ್ಟು ಕುಗ್ರಾಮ ಉಕಿನಿಯಂನಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಅನ್ನು ಪೈಲಟ್ ಸೇಫ್ ಆಗಿ ಲ್ಯಾಂಡ್ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. ಹೆಲಿಕಾಪ್ಟರ್ನಲ್ಲಿ ಗುರೂಜಿ ಜೊತೆ ಇಬ್ಬರು ಆಪ್ತ ಸಹಾಯಕರು ಮತ್ತು ಒಬ್ಬ ಪೈಲಟ್ ಪ್ರಯಾಣಿಸುತ್ತಿದ್ದರು. ತಿರುಪುರದಿಂದ ಗುರೂಜಿ ಬೆಂಗಳೂರಿಗೆ ಖಾಸಗಿ ಹೆಲಿಕಾಪ್ಟರ್ನಲ್ಲಿ 10:30ರ ಸುಮಾರಿಗೆ ಹಾರಾಟ ಆರಂಭಿಸಿದ್ದರು.

RELATED ARTICLES  ಮೋಹನ ಹೆಗಡೆ ಹಾಗೂ ಶ್ರೀನಿವಾಸ ಹೆಬ್ಬಾರ್ ಅವರಿಗೆ ನಮ್ಮನೆ ಪ್ರಶಸ್ತಿ : ವಿಭವ್ ಮಂಗಳೂರಿಗೆ ನಮ್ಮನೆ ಯುವ ಪುರಸ್ಕಾರ

ಹವಾಮಾನ ವೈಪರೀತ್ಯದಿಂದ ಪೈಲಟ್ ಹೆಲಿಕಾಪ್ಟರ್ನ್ನು ಉಕಿನಿಯಂನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ಕಡಂಬೂರು ಪೊಲೀಸ್ ಇನ್ಸ್ಪೆಕ್ಟರ್ ಸಿ.ವಡಿವೇಲ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ರವಿಶಂಕರ್ ಗುರೂಜಿಗಳು ಇಂದು 1000 ವರ್ಷಗಳಷ್ಟು ಹಳೆಯದಾದ ಪ್ರಹಲ್ನಾಯಕಿ ಅಂಬಿಗ ಸಮೇದ, ಕಬೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬೇಕಿತ್ತು.

RELATED ARTICLES  ಬೈಕ್ ಹಾಗೂ ಆಟೋ ಓಡಿಸಿ ಸರಳತೆ ಮೆರೆದ ಸ್ಪೀಕರ್..!