ಅಂಕೋಲಾ: ಗಣರಾಜ್ಯೋತ್ಸವದ ನಿಮಿತ್ತ ಶ್ರೀ ನಾರಾಯಣಗುರು ವೇದಿಕೆ, ತಾಲೂಕು ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿನ ವೃತ್ತದಲ್ಲಿ ಶ್ರೀ ನಾರಾಯಣಗುರುಗಳಿಗೆ ಗೌರವ ಕಾರ್ಯಕ್ರಮವನ್ನು ಮುಂಜಾನೆ 8.30ಕ್ಕೆ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ಗಣರಾಜ್ಯೋತ್ಸವ ಪರೇಡ್‌ಗೆ ಕೇರಳ ಸರಕಾರ ಕಳುಹಿಸಿದ್ದ ಪ್ರವಾಸೋದ್ಯಮವನ್ನು ಬಿಂಬಿಸುವ ರೂಪಕದಲ್ಲಿ ಶ್ರೀ ನಾರಾಯಣ ಗುರುಗಳ ಪ್ರತಿಮೆ ಅಳವಡಿಸಿತ್ತು. ಆದರೆ ಕೇಂದ್ರ ಸರಕಾರ ಇದನ್ನು ತಿರಸ್ಕರಿಸಿ ನಾರಾಯಣಗುರುಗಳ ಬದಲಾಗಿ, ಶಂಕರಾಚಾರ್ಯರ ಪ್ರತಿಮೆ ಅಳವಡಿಸುವಂತೆ ಸೂಚಿಸಿತ್ತು. ಇದು ವಿವಾದಕ್ಕೂ ಕೂಡ ಕಾರಣವಾಗಿತ್ತು. ಇದರಿಂದಾಗಿ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಣರಾಜ್ಯೋತ್ಸವದಂದು ಶ್ರೀ ನಾರಾಯಣಗುರು ಗೌರವ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

RELATED ARTICLES  ಕುಮಟಾ ಕನ್ನಡ ಸಂಘದ ಜನನುಡಿ ಸಾಹಿತ್ಯ ಸಮ್ಮೇಳನ ನ.30ಕ್ಕೆ : ಸದಾನಂದ ದೇಶಭಂಡಾರಿ

ಅದರಂತೆ ಅಂಕೋಲಾದಲ್ಲಿಯೂ ಕೂಡ ಈ ಗುರು ಗೌರವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹಾಗೇ ಗುರುವಾರ ಜನೆವರಿ 26ರಂದು 2ನೇ ವರ್ಷದ ಗುರು ಗೌರವವನ್ನು ಹಮ್ಮಿಕೊಂಡಿದ್ದಾರೆ. ಇದು ಪಕ್ಷಾತೀತ ಮತ್ತು ಜಾತ್ಯಾತೀತವಾಗಿದ್ದು, ಶ್ರೀ ನಾರಾಯಣ ಗುರುಗಳ ಅಭಿಮಾನಿಗಳು ಬೆಳಿಗ್ಗೆ 8.30ಕ್ಕೆ ಆಗಮಿಸುವಂತೆ ಶ್ರೀ ನಾರಾಯಣಗುರು ವೇದಿಕೆ ಅಧ್ಯಕ್ಷ ನಾಗರಾಜ ಮಂಜಗುಣಿ, ಕಾರ್ಯದರ್ಶಿ ಮಂಜುನಾಥ ಕೆ. ನಾಯ್ಕ, ತಾಲೂಕು ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ, ಕಾರ್ಯದರ್ಶಿ ಮೋಹನ ಎಚ್. ನಾಯ್ಕ ತಿಳಿಸಿದ್ದಾರೆ.

RELATED ARTICLES  ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು: ದಿನಕರ ಶೆಟ್ಟಿ