ಕುಮಟಾ : ಗ್ರಾಮಪಂಚಾಯತ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಉಮೇಶ ಗಾಂವಕರ, ಇವರು ೭೪ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ “ಗಣರಾಜ್ಯೋತ್ಸವದ ಧ್ಯೇಯೋದ್ದೇಶಗಳನ್ನು, ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು”. ಹಿರೇಗುತ್ತಿಯ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶಾಂತಾ ಎನ್ ನಾಯಕ, ಸದಸ್ಯರಾದ ಮಹೇಶ ನಾಯಕ, ಆನಂದು ನಾಯಕ, ರಮಾಕಾಂತ ಹರಿಕಂತ್ರ ಹಾಗೂ ಸರ್ವ ಸದಸ್ಯರು, ಪಿ.ಡಿ.ಓ ನವೀನ ನಾಯ್ಕ, ಹಾಗೂ ಸಿಬ್ಬಂದಿಗಳು, ಪ್ರಾಥಮಿಕ, ಹೈಸ್ಕೂಲ್, ಕಾಲೇಜಿನ ಅಧ್ಯಾಪಕ ವೃಂದದವರು, ಗಣ್ಯ ವ್ಯಕ್ತಿಗಳು, ಊರ ನಾಗರಿಕರು, ಗ್ರಾಮ ಪಂಚಾಯತ ಸಿಬ್ಬಂದಿಗಳು, ಶ್ರೀ ಬ್ರಹ್ಮಜಟಕ ಯುವಕ ಸಂಘದವರು ಹಾಜರಿದ್ದರು.
ಹಿ.ಪ್ರಾ.ಶಾಲೆ ಮತ್ತು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾಥಿಗಳು ಧ್ವಜವಂದನೆ ಸಲ್ಲಿಸಿದರು. ಊರಿನೆಲ್ಲೆಡೆ ಹಬ್ಬದ ವಾತಾವರಣ ಉಂಟಾಯಿತು. ಪ್ರಾರಂಭದಲ್ಲಿ ಸೆಕೆಂಡರಿ ಹೈಸ್ಕೂಲಿನ ವಿದ್ಯಾರ್ಥಿನಿ ನಾಗಶ್ರೀ ಸಂಗಡಿಗರು ಧ್ವಜಗೀತೆ, ವಂದೇಮಾತರಂ ಹಾಡಿದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು.

RELATED ARTICLES  ಜನರ ಅವಶ್ಯಕತೆಗೆ ಸ್ಪಂದಿಸಿದಾಗ ಮಾತ್ರ ಸೇವೆ ಸಫಲ - ತಿಮ್ಮಪ್ಪಯ್ಯ ಮಡಿಯಾಲ್

ವರದಿ:ಎನ್.ರಾಮು.ಹಿರೇಗುತ್ತಿ