ಕಾರವಾರ: ಕಾರವಾರದ ಅರ್ಜುನ್ ಥಿಯೇಟರ್ ನಲ್ಲಿ ಪಠಾಣ್ ಸಿನಿಮಾ ಪ್ರದರ್ಶನ ಮಾಡದಂತೆ ಗುರುವಾರ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ನಂದಕಿಶೋರ್ ನೇತೃತ್ವದಲ್ಲಿ ಸುಮಾರು 20 ಹಿಂದೂ ಕಾರ್ಯಕರ್ತರು ಪ್ರತಿಭಟಿಸಿ, ಪಠಾಣ್ ಚಿತ್ರ ಹಾಗೂ ಥಿಯೇಟರ್ ವಿರುದ್ಧ ಘೋಷಣೆ ಕೂಗಿದರು.

RELATED ARTICLES  ಭಟ್ಕಳದಲ್ಲಿ ಸುನಿಲ್ ‌ನಾಯ್ಕ ನಾಮಪತ್ರ ಸಲ್ಲಿಕೆ: ಸಹಸ್ರಾರು ಜನರ ಬೆಂಬಲ ತೋರಿದ ಬಿಜೆಪಿ.

ಥಿಯೇಟರ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಪ್ರತಿಭಟನಾಕಾರರು, ಮಾಲೀಕನಿಗೆ ಕರೆ ಮಾಡಿ ಪಠಾಣ್ ಚಿತ್ರದ ಪ್ರದರ್ಶನ ನಿಲ್ಲಿಸುವಂತೆ ತಾಕೀತು ಮಾಡಿದರು. ಇದಕ್ಕೆ ಒಪ್ಪದಕ್ಕೆ ಆಕ್ರೋಶಗೊಂಡ ಪ್ರತಿಭಟನಾಕಾರರು, ಥಿಯೇಟರ್ ಗೆ ಬೀಗ ಹಾಕಲು ಮುಂದಾದರು. ಈ ವೇಳೆ ಪರಿಸ್ಥಿತಿ ಕೈ ಮೀರುವ ಹಂತದಲ್ಲಿದ್ದಿದ್ದರಿಂದ ಎಚ್ಚೆತ್ತ ಪೊಲೀಸರು ಪ್ರತಿಭಟನಾಕರರನ್ನು ವಶಕ್ಕೆ ಪಡೆದು ಜಿಲ್ಲಾ ಪೊಲೀಸ್ ಪರೇಡ್ ಮೈದಾನಕ್ಕೆ ಕರೆತಂದು ಬಳಿಕ ಬಿಡುಗಡೆ ಮಾಡಿದರು.

RELATED ARTICLES  ಜೀವನದ ಪಾಠ ಕ್ರೀಡೆಯಲ್ಲಿದೆ : ವಿನಾಯಕ ಬ್ರಹ್ಮೂರು