ಹೊನ್ನಾವರ: ಸಾಲ್ಕೋಡ್‌ ಇಲ್ಲಿನ ಬೊಂಡಕಾರ ಈಶ್ವರ ದೇವಾಲಯದಲ್ಲಿ ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ಗೆಳೆಯರ ಬಳಗ ಗುಮ್ಮೇಕೇರಿ ಸಾಲ್ಕೋಡ್ ಇವರ ಸಹಕಾರದಲ್ಲಿ ಗಾನ ನಾಟ್ಯ ವೈಭವ ಕಾರ್ಯಕ್ರಮವನ್ನು ಜನವರಿ 27ರಂದು ಸಂಜೆ 6:00ಗೆ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಕೆ.ಎಸ್.ಹೆಗಡೆ ಅರೆಅಂಗಡಿ ಇವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಖ್ಯಾತ ನ್ಯಾಯವಾದಿಗಳಾದ ಎಂ.ಐ.ಹೆಗಡೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಮಚಂದ್ರ ಕೆ.ಎಂ. ಹಾಗೂ ಬಾಲಚಂದ್ರ ಜಿ. ನಾಯ್ಕ, ಗ್ರಾಮ ಪಂಚಾಯತ ಸದಸ್ಯರು ಸಾಲ್ಕೋಡ್‌ ಆಗಮಿಸಲಿದ್ದಾರೆ. ತದನಂತರ ಪ್ರಸನ್ನ ಭಟ್ಟ ಉಡುಪಿ ಸಂಗಡಿಗರಿಂದ ಸುಗಮ ಸಂಗೀತ, ಸಂಗೀತಾ ನಾಯ್ಕ್, ಸಂಗೀತ ಉಪನ್ಯಾಸಕರು ಎಸ್.ಡಿ.ಎಮ್.ಕಾಲೇಜ್ ಹೊನ್ನಾವರ ಇವರಿಂದ ಶಾಸ್ತ್ರೀಯ ಸಂಗೀತ, ಪೂಜಾ ಹೆಗಡೆ ಹೊನ್ನಾವರ ಸಂಗಡಿಗರಿಂದ ಭರತನಾಟ್ಯ ಹಾಗೂ ಕೃಷ್ಣಪ್ರಸಾದ ಮಾಳ್ಕೋಡ್‌ ಹಾಗೂ ವಿನಾಯಕ ಭಟ್ ಇವರಿಂದ ತಬಲಾ ಸೋಲೋ ಕಾರ್ಯಕ್ರಮ ನಡೆಯಲಿದೆ. ಇವರಿಗೆ ವಿನಾಯಕ ಭಟ್ ತಬಲಾ ಸಾಥ್‌, ಹರಿಶ್ಚಂದ್ರ ನಾಯ್ಕ ಇಡುಗುಂಜಿ ಸಂವಾದಿನಿ ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಬೇಕೆಂದು ರಾಗಶ್ರೀ ಅಧ್ಯಕ್ಷ ವಿದ್ವಾನ್ ಶಿವಾನಂದ ಭಟ್ಟ, ಕಾರ್ಯದರ್ಶಿ ವಿದ್ವಾನ್ ಎನ್.ಜಿ.ಹೆಗಡೆ ಹಾಗೂ ಗೆಳೆಯರ ಬಳಗ ಗುಮ್ಮೆಕೇರಿ ಸಾಲ್ಕೋಡ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಅಸ್ಥಿತ್ವಕ್ಕೆ ಬರಲಿದೆ ಪ್ರಾಥಮಿಕ ಶಿಕ್ಷಣ ಪರಿಷತ್ : ಸಚಿವ ಸುರೇಶಕುಮಾರ್