ಹೊನ್ನಾವರ : ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಸರವನ್ನು ಸಹೋದರನೇ ಎಗರಿಸಿ ಅಕ್ಕನಿಗೆ ಪಂಗನಾಮ ಹಾಕಲು ಯತ್ನಿಸಿದ ಘಟನೆ ವರದಿಯಾಗಿದೆ. ಮನೆಯೊಂದರ ಕಪಾಟಿನಲ್ಲಿದ್ದ ಸರ ಕಳ್ಳತನವಾದ ಬಗ್ಗೆ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಭೇದಿಸಿದ ಪೊಲೀಸರಿಗೆ ಶಾಕಿಂಗ್ ನ್ಯೂಸ್ ಕಾದಿತ್ತು. ಅಕ್ಕನ ಸರ ಎಗರಿಸಿದ ಪ್ರಕರಣ ಇದಾಗಿತ್ತು.

RELATED ARTICLES  ಶ್ರೀ ರಾಮ ನವಮಿಯ ಸುಲಭ ಪೂಜೆಯ ವಿಧಾನ

ಆರೋಪಿ ಚಿದಂಬರ ನಾಯ್ಕ ಇವರನ್ನು ಬಂಧಿಸಿದ್ದಾರೆ. ಕರ್ಕಿ ಪಾವಿನಕುರ್ವಾದ ಸವಿತಾ ನಾಯ್ಕ ಇವರು ಪತಿ ನಿಧನ ಬಳಿಕ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರೊಂದಿಗೆ ಚಿಕ್ಕಪ್ಪನ ಮಗನಾದ ಚಿದಂಬರ ನಾಯ್ಕ ಕೂಡಾ ವಾಸವಾಗಿದ್ದು, ಯಾರ ಗಮನಕ್ಕೂ ಬಾರದೆ ವ್ಯಾನಿಟಿ ಬ್ಯಾಗನಲ್ಲಿದ್ದ ಕಪಾಟಿನ ಕೀ ತೆಗೆದು ಎರಡು ಲಕ್ಷ್ಯಕ್ಕೂ ಅಧಿಕ ಮೌಲ್ಯದ 62 ಗ್ರಾಂ ಬಂಗಾರ ಕದ್ದು ಕೈಚಳಕ ತೋರಿದ್ದ.

RELATED ARTICLES  ರೈಲಿನಿಂದ ಬಿದ್ದು ಕಬ್ಬಿಣ ಸಲಾಕೆಗೆ ನೇತಾಡುತ್ತಿದ್ದ

ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಸಿ.ಪಿ.ಐ ಶ್ರೀಧರ ಎಸ್.ಆರ್, ಪಿಎಸೈ ಮಂಜೇಶ್ವರ ಚಂದಾವರ, ಮಹಾಂತೇಶ ನಾಯಕ, ಸಾವಿತ್ರಿ ನಾಯಕ, ಸಿಬ್ಬಂದಿಗಳಾದ ಮಹಾವೀರ, ರಮೇಶ ಲಂಬಾಣಿ,ರಮಾನoದ ನಾಯ್ಕ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.