ದಾಂಡೇಲಿ : ದೇವರಿಗೆ ಹರಕೆ ತೀರಿಸಲು ಬಂದಾತನೇ ಮಸಣ ಸೇರಿದ ಘಟನೆ ವರದಿಯಾಗಿದೆ. ಚಕ್ಕಡಿ ಗಾಡಿ ಪಲ್ಟಿಯಾಗಿ ಚಕ್ರ ಹಾದು ಈ ಸಾವು ಸಂಭವಿಸಿದ್ದು, ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಜನತಾ ಕಾಲೋನಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ನಿವಾಸಿ ಈರಣ್ಣ ಧೂಪದಾಳ ಮೃತ ದುರ್ದೈವಿಯಾಗಿದ್ದಾನೆ.

RELATED ARTICLES  ಬಸ್ ಸಮಯ ಬದಲಾವಣೆಗೆ ವಿರೋಧ : ಬಸ್ ತಡೆದು ಪ್ರತಿಭಟನೆ

ಉಳವಿ ಚನ್ನಬಸವೇಶ್ವರ ಜಾತ್ರೆಗಾಗಿ ಹರಕೆ ತೀರಿಸಲು ಚಕ್ಕಡಿಯಲ್ಲಿ ದಾಂಡೇಲಿ ಭಾಗದಿಂದ ಜೊಯಿಡಾದ ಉಳವಿಗೆ ಬರುತಿದ್ದ ಚಕ್ಕಡಿಗಾಡಿಗೆ ಹೆದ್ದಾರಿಯಲ್ಲಿ ಬರುತಿದ್ದ ವಾಹನವೊಂದು ಹಾರ್ನ ಮಾಡಿದ್ದರಿಂದ ಹೆದರಿದ ಎತ್ತುಗಳು ಕಾಲುವೆಗೆ ಚಕ್ಕಡಿ ಸಮೇತ ಹಾರಿದ್ದರಿಂದ ಚಕ್ಕಡಿ ಪಲ್ಟಿಯಾಗಿ ಚಕ್ಕಡಿಯ ಚಕ್ರ ದೇಹದ ಮೇಲೆ ಹರಿದು ಘಟನೆ ನಡೆದಿದೆ. ಘಟನೆ ಸಂಬಂಧ ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ನಮ್ಮ ಪುರಾಣಗಳ ಪ್ರಕಾರ ಈ 8 ವ್ಯಕ್ತಿಗಳು ಇನ್ನೂ ಬದುಕಿದ್ದಾರಂತೆ!