ಕುಮಟಾ: ಹಣಗಳಿಸುವ ಜತೆ ಕೀರ್ತಿ ಗಳಿಸಲು ಪ್ರಯತ್ನಿಸಬೇಕಿದ್ದು, ಅಂಕ ಗಳಿಕೆಯಿಂದ ಜೀವನವಾಗುವುದಿಲ್ಲ. ಸಮಾಜದಲ್ಲಿ ಹೆಸರುಗಳಿಸಿದಾಗ ಬದಕು ಸಾರ್ಥಕವಾಗುತ್ತದೆ ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ಟ ಹೇಳಿದರು. ಅವರು ಭಾನುವಾರ ಪಟ್ಟಣದ ಹವ್ಯಕ ಸಭಾಭವನದಲ್ಲಿ ಸಾರ್ಥ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಪರದೇಶವಾಸ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

ಇತ್ತೀಚಿನ ಕೆಲ ವರ್ಷಗಳಿಂದ ಮತದಾನ ಚಲಾಯಿಸಲು ಯುವಕರು ಹಿಂದೇಟು ಹಾಕುತ್ತಿದ್ದು, ಮತ ಚಲಾವಣೆ ನಮ್ಮ ಹಕ್ಕು ಎಂದು ಭಾವಿಸಿ, ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಲೇಖಕ ಕಿರಣ ಉಪಾಧ್ಯಾಯ ವಿದೇಶದಲ್ಲಿದ್ದರೂ ಕನ್ನಡದ ಮೇಲೆ ಅತಿಯಾದ ಪ್ರೀತಿ ತೋರಿಸುತ್ತಿದ್ದಾರೆ. ಹೊರ ದೇಶದಲ್ಲಿ ಕನ್ನಡ ಮರೆತರೆ ಹೆಚ್ಚು ಡಾಲರ್ ಪಡೆಯಬಹುದು ಎಂದು ಹಲವರ ಅಭಿಪ್ರಾಯವಾಗಿದೆ. ಆದರೆ ಕಿರಣ ಉಪಾಧ್ಯಾಯ ಕನ್ನಡವನ್ನು ಬೆಳೆಸುತ್ತಿದ್ದಾರಲ್ಲದೇ, ಯಕ್ಷಗಾನದ ಹಿರಿಯ ಕಲಾವಿದರನ್ನು ಸೌದಿ ಅರೆಬಿಯಾಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಪ್ರಸಿದ್ಧ ತಾಣಗಳನ್ನು ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ. ಜೀವನದಲ್ಲಿ ಶಿಸ್ತು ಮತ್ತು ಪ್ರೀತಿ ಬೆಳೆಸಿಕೊಂಡ ಅಪರೂಪದ ವ್ಯಕ್ತಿ ಕಿರಣ ಉಪಾಧ್ಯಯ ಎಂದ ಅವರು, ಎಲ್ಲರೂ ವಾಗ್ಮಿಗಳಾಗಲು ಸಾಧ್ಯವಿಲ್ಲ. ಸಾಧನೆ ಮಾಡಿ ತೋರಿಸಿದಂತಹ ವ್ಯಕ್ತಿ ವಾಗ್ಮಿಯಾಗುತ್ತಾನೆ. ಅದಕ್ಕೆ ಉದಾಹರಣೆ ಚಕ್ರವರ್ತಿ ಸೂಲಿಬೆಲೆ. ಅವರ ಪ್ರತಿ ವಾಕ್ಯಯೂ ರಾಷ್ಟ್ರೀಯತೆ ಜಾಗೃತಗೊಳಿಸುತ್ತದೆ ಎಂದರು.
     

RELATED ARTICLES  ಅಂಗವಿಕಲರ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ!

ಪರದೇಶವಾಸಿ ಪುಸಕ್ತ ಲೋಕಾರ್ಪಣೆಗೊಳಿಸಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಪ್ರತಿಭೆ ಎನ್ನುವುದು ಪ್ರಕಾಶ. ನಾಲ್ಕಾರು ಜನರಿಗೆ ಪ್ರಕಾಶವಾಗುವಂತೆ ನಮ್ಮ ಬದುಕು ಇರಬೇಕು. ಶಿಕ್ಷಣ ಎನ್ನುವುದು ಪರಿಪೂರ್ಣ ಬೆಳವಣಿಗೆ. ಶಿಕ್ಷಣ ಪಡೆದರೆ ಬದುಕು ಸುಲಭವಾಗುತ್ತದೆ ಎಂದು ನಾವೆಲ್ಲರೂ ಭಾವಿಸಿಕೊಂಡಿದ್ದೇವೆ. ಸಮಾಜಕ್ಕೆ ಒಳಿತಾಗುವಂತಹ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದರು.
     

ಒಳ್ಳೆಯ ಕೆಲಸ ನಿರಂತರವಾಗಿ ನಡೆಯಬೇಕು. ನಿರಂತರ ಇದ್ದರೆ ಅದಕ್ಕೆ ಭಗವಂತನ ಕೃಪೆ ಸದಾ ಇರುತ್ತದೆ. ನಮ್ಮ ಪರಂಪರೆಯ ಕುರಿತ ಅಭಿಮಾನವನ್ನು ಉತ್ತುಂಗಕ್ಕೇರಿಸಿದಾಗ ಪ್ರತಿಭಾ ಪುರಸ್ಕಾರ ಸಾರ್ಥಕಗೊಳ್ಳುತ್ತದೆ. ಸಾರ್ಥ ಪ್ರತಿಷ್ಠಾನದಿಂದ ಪ್ರತಿಭಾ ಪುರಸ್ಕಾರ ಪಡೆದುಕೊಂಡು, ಹತ್ತಾರು ವರ್ಷದ ನಂತರ ಒಳ್ಳೆಯ ಉದ್ಯೋಗ ಪಡೆದು ತಾವು ನಾಲ್ಕಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು ಎಂದು ಕರೆ ನೀಡಿದ ಅವರು, ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆ ಒಳಗೊಂಡ ಉತ್ತರಕನ್ನಡ ಜಿಲ್ಲೆಯಲ್ಲಿರುವ ವೈವಿದ್ಯತೆ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ಆದರೆ ನಾವು ಅಂದುಕೊAಡಿರುವ ಅಭಿವೃದ್ಧಿಯಾಗಿಲ್ಲ ಎಂಬುದು ಒಪ್ಪಿಕೊಳ್ಳಬೇಕು. ನಮ್ಮ ಜಿಲ್ಲೆಯ ಅಭಿವೃದ್ಧಿಯ ಕುರಿತು ಇಂದಿನ ಯುವ ಜನತೆ ಚಿಂತಿಸುವ ಅವಶ್ಯಕತೆ ಖಂಡಿತ ಇದೆ ಎಂದರು.
   

RELATED ARTICLES  ಕೆಲಸ ಮಾಡುವಾಗಲೇ ಕುಸಿದುಬಿದ್ದು ಸಾವು.

ಸಾರ್ಥ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಉಗ್ರು ಅಧ್ಯಕ್ಷತೆ ವಹಿಸಿದ್ದರು. ಲೇಖಕ ಕಿರಣ ಉಪಾಧ್ಯಾಯ ಪರದೇಶವಾಸಿ ಪುಸಕ್ತದ ಕುರಿತು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಸ್.ಎನ್.ಭಟ್ಟ ವೇದಿಕೆಯಲ್ಲಿದ್ದರು. ನಾಗಶ್ರೀ ಪ್ರಾರ್ಥಿಸಿದರು. ನಂತರ ಉತ್ತರಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು.