ಹಳಿಯಾಳ : ಕಾರಿಗೆ ಢಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಟಾಟಾ ಏಸ್ ವಾಹನವನ್ನು ಬೆನ್ನತ್ತಿದ್ದ ಪೊಲೀಸರು ಅದನ್ನು ಮೊಲೆಮ್ ಬಳಿ ವಶಪಡಿಸಿಕೊಳ್ಳುವಲ್ಲಿ ಮೊಲೆಮ್ ಔಟ್ ಪೋಸ್ಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ವಾಹನ ವಶಪಡಿಸಿಕೊಂಡ ನಂತರದಲ್ಲಿ ಆಘಾತಕಾರಿ ಸುದ್ದಿ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಢಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಟಾಟಾ ಏಸ್ ವಾಹನ ಬಾಗಲಕೋಟದಿಂದ ಕದ್ದದ್ದು ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.

RELATED ARTICLES  ಸಂಭ್ರಮದಿಂದ ಸಂಪನ್ನವಾದ ಸುಂಕಸಾಳ ಸರ್ಕಾರಿ ಪ್ರೌಢಶಾಲೆಯ ದಶಮಾನೋತ್ಸವ .

ಅನಮೋಡ್ ಘಾಟ್ ಬಳಿ ಮಹಾರಾಷ್ಟ್ರ ನೋಂದಣಿಯ ಟಾಟಾ ನೆಕ್ಸ್ ಕಾರಿಗೆ ಬಾಗಲಕೋಟ್ ಜಿಲ್ಲೆಯ ನೋಂದಣಿಯಿರುವ ಪಿಕ್‌ಅಪ್ ವಾಹನವೊಂದು ಗುದ್ದಿಪರಾರಿಯಾಗಿತ್ತು. ರಾಮನಗರ ಪೊಲೀಸರು ಈ ಸಂಬಂಧ ಗೋವಾ ಮೊಲೆಮ್ ಪೋಲೀಸರಿಗೆ ಮಾಹಿತಿ ನೀಡಿ ಟಾಟಾ ಏಸ್ ವಾಹನ ಗೋವಾ ಮೊಲೆಮ್‌ನತ್ತ ಸಾಗುತ್ತಿದೆ ಎಂದು ತಿಳಿಸಿದ್ದ ಹಿನ್ನಲೆಯಲ್ಲಿ ಪಿಎಸ್.ಐ
ಅಜಯ ಧುರಿ ನೇತೃತ್ವದಲ್ಲಿ ಪೊಲೀಸರ ತಂಡ ಕಾವಲು ಹಾಕಿ ಆ ಗಾಡಿಯನ್ನು ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಆಘಾತಕಾರಿ ಸುದ್ದಿ ತಿಳಿದುಬಂದಿದೆ.

RELATED ARTICLES  ಇಹ ಲೋಕ ತ್ಯಜಿಸಿದ 'ಬದುಕಲು ಕಲಿಯಿರಿ' ಕೃತಿ ಕರ್ತೃ ಸ್ವಾಮಿ ಜಗದಾತ್ಮನಂದಜೀ!

ಹೆದ್ದಾರಿಯಲ್ಲಿ ಪಿಕ್‌ಅಪ್ ವಾಹನ ಬಂದಾಗ ಪೊಲೀಸರು ಕೈ ಸನ್ನೆ ಮಾಡಿದರೂ ನಿಲ್ಲಿಸದೇ ಮುಂದೆ ಸಾಗಿದಾಗ ಬೆನ್ನತ್ತಿ ಅದನ್ನು ಪೊಲೀಸರು ಹಿಡಿದಿದ್ದಾರೆ. ವಾಹನದ ಮಾಹಿತಿ ಪರಿಶೀಲಿಸಿದಾಗ ನಾಗರಾಜ ಎನ್ನುವವರಿಗೆ ಸೇರಿದ ಟಾಟಾ ಏಸ್ ವಾಹನವಾಗಿದ್ದು, ಅದನ್ನು ಜನವರಿ 29 ರಂದು ಬಾಗಲಕೋಟದಿಂದ ಕಳ್ಳತನ ಮಾಡಿ ತರಲಾಗಿತ್ತು.