ಅಂಕೋಲಾ : ಕಾಡುಹಂದಿ ಮಾಂಸವೆಂದು ಜನರನ್ನು ನಂಬಿಸಿ ಅವರಿಗೆ ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣ ಅಂಕೋಲಾ ತಾಲೂಕಿನ ಮೊಗಟಾ, ಹಿಲ್ಲೂರು ಭಾಗದಲ್ಲಿ ಬೆಳಕಿಗೆ ಬಂದಿದೆ. ಇದರ ಬಗ್ಗೆ ನಿಜಾಂಶ ತಿಳಿದ ನಂತರ ಸಾರ್ವಜನಿಕರು ನಾಯಿ ಮಾಂಸ ತಿನ್ನಿಸಿದ ಯುವಕರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ ಎನ್ನಲಾಗಿದೆ.

ಮೊಗಟಾ ಹಾಗೂ ಹಿಲ್ಲೂರು ಭಾಗದಲ್ಲಿ ಅಲೆಮಾರಿ ಜನಾಂಗದ ಯುವಕರಿಬ್ಬರು ಕಾಡುಹಂದಿ ಮಾಂಸ ಎಂದು ಜನರನ್ನು ನಂಬಿಸಿ ನಾಯಿ ಮಾಂಸ ಮಾರಾಟದಲ್ಲಿ ತೊಡಗಿದ್ದರು. ಹೀಗೆ ನಂಬಿಸಿ ಹತ್ತಾರು ಮನೆಗಳಿಗೆ ನಾಯಿ ಮಾಂಸವನ್ನು ತಿನ್ನಿಸಿ ಭರ್ಜರಿ ಹಣ ಮಾಡಿದ್ದಾರೆ. ನಂತರದಲ್ಲಿ ಯುವಕರು ನೀಡಿದ ಮಾಂಸ ಕಾಡು ಹಂದಿ ಮಾಂಸವಲ್ಲ, ನಾಯಿ ಮಾಂಸ ಎಂದು ತಿಳಿದುಬಂದಿದೆ.

RELATED ARTICLES  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಚನ್ನಮಲ್ಲ ಸ್ವಾಮಿಗಳು

ಇದನ್ನೂ ಓದಿ – ಕಾರಿಗೆ ಡಿಕ್ಕಿ ಹೊಡೆದು ತಪ್ಪಿಸಿಕೊಂಡು ಹೋಗುವಾಗ ತಗಲಾಕಿಕೊಂಡ ಕತರ್ನಾಕ್ ಆಸಾಮಿ.

ನಾಯಿ ಮಾಂಸ ತಿನ್ನಿಸಿದ ಯುವಕರಿಗೆ ಬುದ್ಧಿ ಕಲಿಸಲು ಸಾರ್ವಜನಿಕರು ಮಾಂಸ ಖರೀದಿಸುವ ನೆಪದಲ್ಲಿ ಯುವಕರನ್ನು ಕರೆಸಿದ್ದಾರೆ. ಅದರಂತೆ ಯುವಕರು ಮಾಂಸ ಹಿಡಿದುಕೊಂಡು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಯುವಕರಿಬ್ಬರನ್ನು ಲಾಕ್ ಮಾಡಿದ ಸಾರ್ವಜನಿಕರು ಪ್ರಶ್ನಿಸಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ಸಾರ್ವಜನಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಯುವಕರು ಬೇರೆಡೆ ನಾಯಿಗಳನ್ನ ಹಿಡಿದು ಕೊಂದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದರು. ಮಾಂಸದ ವಿಚಾರವಾಗಿ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದ ವೇಳೆ ನಾಯಿ ಹಿಡಿಯುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.