ಕುಮಟಾ : ಕಲಿಕಾ ಚೇತರಿಕೆ ವರ್ಷದ ಹಿನ್ನೆಲೆಯಲ್ಲಿ ತಾಲೂಕಿನ ದಿವಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ ನಡೆಯಿತು.
ಕಲಿಕಾ ಹಬ್ಬದ ನಿಮಿತ್ತ ಶಾಲೆಯನ್ನು ಹೂವು, ಬಾಳೆಗಿಡ, ತಳಿರು ತೋರಣ, ಬಲೂನು, ಪೇಪರ್ ಕಟಿಂಗ್ಸ್‌ಗಳಿಂದ
ಉತ್ತಮವಾಗಿ ಸಿಂಗರಿಸಲಾಗಿತ್ತು. ಅತಿಥಿಗಳು, ವಿದ್ಯಾರ್ಥಿಗಳ ತಲೆಗಳ ಮೇಲೆ ಕಲರ್ ಕಲರ್ ಪೇಪರ್ ಟೋಪಿ, ಆಕರ್ಷಕ ವೇಷಭೂಷಣ, ಮೆರವಣಿಗೆ ವಾದ್ಯಘೋಷ, ಇವೆಲ್ಲವೂ ಕಲಿಕಾ ಹಬ್ಬದ ಸಂಭ್ರಮ ಹೆಚ್ಚಿಸಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಕಲಿಕಾ ಹಬ್ಬ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಯ ಕಾರ್ಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕ್ಲಸ್ಟರ್ ಮಟ್ಟದ ಎಲ್ಲ ಶಾಲೆಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು, ಕಲಿಕಾ ಹಬ್ಬದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು.
ಇದನ್ನೂ ಓದಿ – ಕದ್ದು ತಂದ ವಾಹನದಲ್ಲಿಯೇ ಕಾರಿಗೆ ಗುದ್ದಿ ಪರಾರಿ ಯತ್ನ.
ಸುಗ್ಗಿ ಕುಣಿತ, ಛದ್ಮವೇಶ, ಯಕ್ಷಗಾನ ನೃತ್ಯ, ಜಾನಪದ ಕುಣಿತಗಳು ಎಲ್ಲರ ಗಮನ ಸೆಳೆಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಇವರ ಗಾಯನಕ್ಕೆ ವಿಜಯ ಮಹಾಲೆ ಸಂಗಡಿಗರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕ ಮಂಜುನಾಥ ಮುಕ್ರಿ, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಆನಂದು ನಾಯಕ, ತಾಲೂಕಾ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ, ಶಿಕ್ಷಕ ವೃಂದದವರು, ಎಸ್.ಡಿ.ಎಂ.ಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹಾಗೂ ಊರ ನಾಗರೀಕರು ಭಾಗವಹಿಸಿದರು.