ಅಂಕೋಲಾ: ತಾಲೂಕಿನ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಪಿ.ಐ ಸಂತೋಷಕುಮಾರ್‌ ಶೆಟ್ಟಿ ಹಾಗೂ ಪಿ.ಎಸ್.ಐ ಪ್ರವೀಣಕುಮಾರ್‌ ವರ್ಗಾವಣೆಗೊಂಡಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯದ ಹಲವೆಡೆಯ ಪೊಲೀಸ್ ಠಾಣೆಗಳ ಅಧಿಕಾರಿಗಳ ಸಾಲು ಸಾಲು ವರ್ಗಾವಣೆ ಆರಂಭಗೊಂಡಿದೆ. ಜಿಲ್ಲೆಯ ವಿವಿಧ ತಾಲೂಕಿನ ಠಾಣೆಗಳ ನಿರೀಕ್ಷಕರು ಮತ್ತು ಉಪನಿರೀಕ್ಷಕರುಗಳ ವರ್ಗಾವಣೆ ಯಾದಿಯೂ ಪ್ರಕಟವಾಗಿದ್ದು ಅದರಲ್ಲಿ ಅಂಕೋಲಾ ತಾಲೂಕಿನಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ ಶೆಟ್ಟಿ ಅವರನ್ನು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರನ್ನಾಗಿ ವರ್ಗಾಯಿಸಲಾಗಿದ್ದು, ಕಡೂರು ವೃತ್ತ ನಿರೀಕ್ಷಕ ಶಿವಕುಮಾರ್‌ ಅವರಿಗೆ ಅಂಕೋಲಾ ಪೊಲೀಸ್ ನಿರೀಕ್ಷಕ ಸ್ಥಾನ ಸೂಚಿಸಲಾಗಿದೆ.

RELATED ARTICLES  ರಸ್ತೆ ಬಂದ್ ಆದೇಶ ವಾಪಸ್ ಪಡೆದ ಜಿಲ್ಲಾಧಿಕಾರಿ.

ಅಂಕೋಲಾ ಕಾನೂನು ಮತ್ತು ಸುವ್ಯವಸ್ಥೆ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣಕುಮಾರ್‌ ಅವರನ್ನು ಹೊನ್ನಾವರಕ್ಕೆ ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಾನಕ್ಕೆ ಕಾರವಾರ ಪಿ.ಎಸ್.ಐ ಕುಮಾರ ಕಾಂಬಳೆರನ್ನು ವರ್ಗಾಯಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

RELATED ARTICLES  ಮನುಷ್ಯನಿಗೆ ಮೊಟ್ಟೆ ಇಡಲು ಸಾಧ್ಯವಿಲ್ಲ ? ಆದರೆ ಇಲ್ಲೊಬ್ಬ ಬಾಲಕ ಮೊಟ್ಟೆ ಇಡುತ್ತಿದ್ದಾನೆ !