ಯಲ್ಲಾಪುರ: ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬಿಸಿಲು ಚಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಧರಣಿ ನಡೆಸಿ ಊರಿಗೆ ಬರುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ತಾಲೂಕಿನ ಮದನೂರು ಪಂಚಾಯಿತಿ ವ್ಯಾಪ್ತಿಯ ಕಂಡ್ರನಕೊಪ್ಪ ಅಂಗನವಾಡಿ ಶಾಲೆಯ ಕಾರ್ಯಕರ್ತೆ, ಇದೇ ಊರಿನ ನಿವಾಸಿ ಗೀತಾ ದೇವಪ್ಪ ಮಿರಾಶಿ(32) ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಜನವರಿ 28ರಂದು ಬೆಂಗಳೂರಿನ ಫ್ರೀಡಂ ಪಾರ್ಕಗೆ ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ಗೀತಾ ಮಿರಾಶಿ ತೆರಳಿದ್ದರು. ಜ.28, 29, 30ರಂದು ಹೋರಾಟದಲ್ಲಿ ಭಾಗವಹಿಸಿ, ಜನವರಿ 30ರಂದು ಇನ್ನಿತರ ಉತ್ತರ ಕರ್ನಾಟಕದ ಅಂಗನವಾಡಿ ಕಾರ್ಯಕರ್ತೆಯೊಂದಿಗೆ ರಾತ್ರಿ 10 ಗಂಟೆಗೆ ರೈಲ್ವೆ ಮುಖಾಂತರ ಹುಬ್ಬಳ್ಳಿಗೆ ಬರುತ್ತಿದ್ದರು. ರೈಲ್ವೇಯಲ್ಲಿಯೇ ಆರೋಗ್ಯದಲ್ಲಿ ಏರುಪೇರಾಗಿ, ಗೀತಾ ಮಿರಾಶಿ ರಕ್ತ ವಾಂತಿ ಮಾಡಿಕೊಳ್ಳಲು ಆರಂಭಿಸಿದರು.


ಜ.31ರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಟ್ರೈನ್ ಹುಬ್ಬಳ್ಳಿ ತಲುಪಿದ ನಂತರವು ಮೂಗು ಬಾಯಿ ಕಣ್ಣು ಕಿವಿಗಳಿಂದ ರಕ್ತ ವಸರಲಾರಂಭಿಸಿತು. ಜೊತೆಗಿದ್ದ ಅಂಗನವಾಡಿ ಕಾರ್ಯಕರ್ತೆಯರು 108 ವಾಹನಕ್ಕೆ ಕರೆ ಮಾಡಿ ಗೀತಾ ಮಿರಾಶಿಯವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಂಜೆ 6 ಗಂಟೆಯ ಸಮಯಕ್ಕೆ ಗೀತಾ ಮಿರಾಶಿ ಮೃತಪಟ್ಟಿದ್ದಾರೆ. ಮೆದುಳು ರಕ್ತಸ್ರಾವದಿಂದ ಸಾವು ಸಂಭವಿಸಿದೆ ಎಂದು ಕಿಮ್ಸ್ ವೈದ್ಯರು ಸಂಬಂಧಿಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ

ಇದನ್ನೂ ಓದಿ – 2000 ಜನರನ್ನು ಉದ್ಯೋಗದಿಂದ ತೆಗೆದ ಪ್ರತಿಷ್ಠಿತ ಕಂಪನಿ.


ಬೆಂಗಳೂರಿಗೆ ತೆರಳುವ ಪೂರ್ವದಲ್ಲಿ ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದ ಗೀತಾ ಮಿರಾಶಿಯವರಿಗೆ ಯಾವುದೇ ಕಾಯಿಲೆಗಳು ಬಾಧಿಸುತ್ತಿರಲಿಲ್ಲ. ಯಾವುದೇ ರೀತಿಯ ಔಷಧೋಪಚಾರದಲ್ಲಿ ಇರಲಿಲ್ಲ ಎಂದು ಅವರ ಸಂಬಂಧಿಕರು ಹೇಳಿದ್ದಾರೆ. ಗಂಡನಿಂದ ವಿಚ್ಛೇದನ ಪಡೆದಿರುವ ಗೀತಾ ಮಿರಾಶಿಯವರಿಗೆ ಆರು ವರ್ಷದ ಹೆಣ್ಣು ಮಗುವಿದೆ, ಅಲ್ಲದೇ ಆಕೆ ತನ್ನ ತಂದೆ ತಾಯಿಗಳನ್ನು ನೋಡಿಕೊಳ್ಳುತ್ತಿದ್ದರು. ಆಕೆಯ ನಿಧನದಿಂದ ಮಗು ಸೇರಿದಂತೆ ತಂದೆ ತಾಯಿಗಳ  ಜೀವನ ಸ್ಥಿತಿ ಕಷ್ಟಕರವಾಗಿದೆ ಎನ್ನಲಾಗಿದೆ.


ಕಿಮ್ಸ್ ನಿಂದ ಮೃತದೇಹವನ್ನು ಮನೆಗೆ ತಂದಾಗ ಮೃತದೇಹದ ಮೇಲೆ ಸಿಐಟಿಯು ದ್ವಜನವನ್ನು ಹೊದಿಸಿ, ಅಂಗನವಾಡಿ ಕಾರ್ಯಕರ್ತೆಯರು ಸಿಐಟಿಯು ಸದಸ್ಯರು ಪ್ರಮುಖರು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕ ಕುಳವಾಡಿ ಮರಾಠಿ ಸಂಘದ ಅಧ್ಯಕ್ಷ ಅಣ್ಣಪ್ಪ ಡಿ.‌ನಾಯ್ಕ ಮಾತನಾಡಿ, ಹೋರಾಟದಲ್ಲಿ ಭಾಗವಹಿಸಲು ತೆರಳಿದ್ದ ಗೀತಾ ಮಿರಾಶಿಯವರ ನಿಧನ ಅತ್ಯಂತ ಖೇದಕರವಾದುದು. ಅವರ ಅಕಾಲಿಕ ನಿಧನದಿಂದಾಗಿ ಅವರ ಕುಟುಂಬ ಬೀದಿಗೆ ಬಿದ್ದಿದೆ. ಆರು ವರ್ಷದ ಮಗಳು ವೃದ್ದ ತಂದೆ ತಾಯಿಗಳ ಔಷಧ ಪ್ರಚಾರ ಹಾಗೂ ಜೀವನ ನಿರ್ವಹಣೆ ಬಹಳ ಕಷ್ಟಕರವಾಗಿದೆ. ಸರ್ಕಾರದ ಪ್ರತಿನಿಧಿಗಳು ಆಕಸ್ಮಿಕವಾಗಿ ಮೃತಪಟ್ಟ ಗೀತಾ ಮಿರಾಶಿ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES  ದಿನಕರ ಶೆಟ್ಟಿ ಅಭಿಮಾನಿಗಳಿಂದ ವಿಜಯೋತ್ಸವ.

ಈ ಸುದ್ದಿ ಓದಿ – ಕೆರೆಯಲ್ಲಿ ಶವ ಪತ್ತೆ : ಜನ ಕಂಗಾಲು.


ಅಂಗನವಾಡಿ ಕ್ಲಸ್ಟರ್ ಮಟ್ಟದ ಮೇಲ್ವಿಚಾರಕಿ ಫಾತೀಮಾ ಜುಳಕಿ, ಸಿಐಟಿಯು ಮುಖಂಡೆ ಲಕ್ಷ್ಮೀ ಸಿದ್ದಿ, ಬೇರೆ ಬೇರೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಾದ ಗೌರಿ ಮರಾಠೆ, ಜಮೀಲಾ ಶೇಖ, ಸಂಗೀತಾ ಶೇಳ್ಕೆ, ತುಳಸಿ ಪಾಟೀಲ್, ವಿಶಾಲಾ ಮರಾಠೆ ಪ್ರಮುಖರಾದ ಜಾನ್ ಬಿಳಕಿ ಮುಂತಾದವರು ಅಂತಿಮ ನಮನ ಸಲ್ಲಿಸಿದರು.