ಯಲ್ಲಾಪುರ: ಅಡಿಕೆ ಕೊನೆಗೊಯ್ಯಲು ಮರ ಹತ್ತಿದ ವ್ಯಕ್ತಿಯೊಬ್ಬ ಆಯತಪ್ಪಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ‌ ತಾಲೂಕಿನ ಇಡಗುಂದಿ ಗ್ರಾಮದ ಸೋನಗಾರಕೇರಿಯಲ್ಲಿ ನಡೆದಿದೆ. ಇಡಗುಂದಿ ಸೋನುಗಾರಕೇರಿ ನಿವಾಸಿ ದತ್ತಾತ್ರೇಯ ಪುಟ್ಟ ಗೌಡ(30) ಮೃತಪಟ್ಟ ದುರ್ದೈವಿಯಾಗಿದ್ದು, ನಾರಾಯಣ ಗೌಡ ಇವರ ತೋಟದಲ್ಲಿ ಅಡಿಕೆ ಮರ ಹತ್ತಿ ಅಡಿಕೆಯನ್ನು ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಮರದಿಂದ ಬಿದ್ದು ಸಾವನ್ನಪ್ಪಿದ್ದಾನೆ. ಪೊಲೀಸ್ ನಿರೀಕ್ಷಕರಾದ ರಂಗನಾಥ ನಿಲಮ್ಮನವರ ಮಾರ್ಗದರ್ಶನದಲ್ಲಿ ಎಎಸ್‌ಐ ವಿಠ್ಠಲ ಮಲವಾಡಕರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES  ಮೇ 11ರಂದು ವಿದ್ಯುತ್ ವ್ಯತ್ಯಯ