ದ್ವಾರಕಾ: ‘ಕೆಲವು ಸರಕು ಮತ್ತು ಸೇವೆಗಳ ತೆರಿಗೆ ದರ ಇಳಿಸಲು ಜಿಎಸ್‌ಟಿ ಮಂಡಳಿ ಸಭೆಯು ನಿರ್ಧಾರ ತೆಗೆದುಕೊಂಡಿರುವುದರಿಂದ ಈ ಬಾರಿ ದೀಪಾವಳಿ ಸಂಭ್ರಮ ಹಬ್ಬಕ್ಕೆ ಮುಂಚಿತವಾಗಿಯೇ ಬಂದಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

RELATED ARTICLES  ಬಿಎಸ್ಎನ್ಎಲ್ ಮ್ಯಾನೇಜ್ ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

27 ಸರಕು, ಸೇವೆಗಳ ತೆರಿಗೆ ದರ ಇಳಿಸಲು ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿರುವುದನ್ನು ಉಲ್ಲೇಖಿಸಿ ಮೋದಿ ಶನಿವಾರ ಮಾತನಾಡಿದ್ದಾರೆ.

ಎರಡು ದಿನಗಳ ಗುಜರಾತ್‌ ಪ್ರವಾಸಕ್ಕೆ ಬಂದಿರುವ ಮೋದಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

RELATED ARTICLES  ಬಿರುಕು ಬಿಟ್ಟಿದೆ ಕರ್ನಾಟಕದ ಹಲವು ಜಲಾಶಯಗಳು: ಏನಾಗುವುದೋ ಮುಂದೆ!

ಒಖಾ ಮತ್ತು ಬೆಟ್‌ ದ್ವಾರಕಾ ನಡುವಿನ ಸೇತುವೆ ಕಾಮಗಾರಿಗೆ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ₹ 5,825 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗೂ ಇದೇ ವೇಳೆ ಮೋದಿ ಚಾಲನೆ ನೀಡಿದ್ದಾರೆ.