ಭಾರತೀಯ ಸೇನೆಯ ಗಡಿ ಭದ್ರತಾ ಪಡೆ (BSF) ವಿಭಾಗದಲ್ಲಿರುವ ಖಾಲಿ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ. ಒಟ್ಟು 1410 ಕಾನ್ಸ್​ಟೇಬಲ್ (ಟ್ರೇಡ್ಸ್​ಮೆನ್) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಬಯಸುವವರು ಗಡಿ ಭದ್ರತಾ ಪಡೆಯ ಅಧಿಕೃತ ವೆಬ್​ಸೈಟ್​ rectt.bsf.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ವಿವರಗಳು:
ಸಂಸ್ಥೆ-ಗಡಿ ಭದ್ರತಾ ಪಡೆ
ಹುದ್ದೆ-ಕಾನ್ಸ್​ಟೇಬಲ್ (ಟ್ರೇಡ್ಸ್​ಮೆನ್)
ಒಟ್ಟು ಹುದ್ದೆ-1410
ಕಾನ್ಸ್​ಟೇಬಲ್ (ಪುರುಷ)- 1343
ಕಾನ್ಸ್​ಟೇಬಲ್ (ಮಹಿಳೆ)- 67
ವಿದ್ಯಾರ್ಹತೆ-10ನೇ ತರಗತಿ, ಐಟಿಐ
ಮಾಸಿಕ ವೇತನ- ₹ 21,700-69,100
ಉದ್ಯೋಗದ ಸ್ಥಳ-ಅಖಿಲ ಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್​ 1, 2023

RELATED ARTICLES  QR Code Scan ಮಾಡುವಾಗ ಇರಲಿ ಎಚ್ಚರ.


ಅರ್ಹತೆ: ಕಾನ್ಸ್​ಟೇಬಲ್ (ಟ್ರೇಡ್ಸ್​ಮೆನ್) ಹುದ್ದೆಗಳಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸಬಹುದು. ಕೆಲವು ಹುದ್ದೆಗಳಿಗೆ ಎಸ್​ಎಸ್​ಎಲ್​ಸಿ ಜೊತೆ ಐಟಿಐ ಪ್ರಮಾಣ ಪತ್ರ ಬೇಕು ಎಂದು ತಿಳಿಸಲಾಗಿದೆ. ಮಾಹಿತಿಗೆ ಅಧಿಸೂಚನೆ ಪರಿಶೀಲಿಸಬಹುದು.


ವಯೋಮಿತಿ: 18 ರಿಂದ 25 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾರ್ಚ್​ 1, 2023ಕ್ಕೆ ಅನುಗುಣವಾಗಿ ಅಭ್ಯರ್ಥಿಗಳ ವಯಸ್ಸನ್ನು ಪರಿಗಣಿಸಲಾಗುತ್ತದೆ. ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಇದನ್ನು ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.
ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ

RELATED ARTICLES  ಫೆಬ್ರವರಿ 10 ರಿಂದ 5ನೇ ವರ್ಷದ ಪೌರಾಣಿಕ ಯಕ್ಷೋತ್ಸವ – “ಯಕ್ಷಗಾನ ಸಪ್ತಾಹ”


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 1, 2023
ಆಯ್ಕೆ ಪ್ರಕ್ರಿಯೆ: ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಈ ಲಿಂಕ್ https://rectt.bsf.gov.in/   ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.
ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ https://drive.google.com/file/d/1V30KNwqHRebDJ3K3abyIKnVYJVsTqTWv/view  ಕ್ಲಿಕ್ ಮಾಡಿ ನೋಡಬಹುದು.