ಕುಮಟಾ : ತಾಲೂಕಿನ ಜನರ ಜೀವನದಿ ಎನಿಸಿರುವ ಅಘನಾಶಿನಿ ನದಿಗೆ ಕಾಶಿಯ ಗಂಗಾರತಿ ಮಾದರಿಯಲ್ಲಿಯೇ ಆರತಿ ಕಾರ್ಯಕ್ರಮ ಮಿರ್ಜಾನ ತಾರಿಬಾಗಿಲಿನಲ್ಲಿ ಫೇ. 4 ರಂದು ನಡೆಯಲಿದೆ ಎಂದು ಯುವಾ ಬ್ರಿಗೇಡ್ ವಿಭಾಗ ಸಂಚಾಲಕರಾದ ಅಣ್ಣಪ್ಪ ನಾಯ್ಕ ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಯುವಾ ಬ್ರಿಗೇಡ್ ಕುಮಟಾ ತಂಡದ ವತಿಯಿಂದ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದ ಕುರಿತಾಗಿ ಮಾಹಿತಿ ನೀಡಿದರು.

RELATED ARTICLES  50 ಸಾವಿರ ರೂ ಮೌಲ್ಯದ ಕಟ್ಟಿಗೆ ವಶ: ಒಬ್ಬ ಆರೋಪಿ ಬಂಧನ ; ಮೂವರು ಪರಾರಿ

ಈ ಕಾರ್ಯಕ್ರಮಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ ಕುಮಟಾ ಇದರ ಪೂಜ್ಯ ಶ್ರೀ ಬ್ರಹ್ಮಚಾರೀ ಶ್ರೀ ನಿಶ್ಚಲಾನಂದನಾಥ ಸ್ವಾಮಿಜಿ ಅವರು ಹಾಗೂ ಸಿಗಂದೂರು ದೇವಸ್ಥಾನದ ಧರ್ಮದರ್ಶಿಗಳಾದ ಡಾ. ಎಸ್ ರಾಮಪ್ಪನವರು, ಕುಮಟಾದ ನಿವೃತ್ತ ಮುಖ್ಯೋಪಾಧ್ಯಾಯ ಎಂ. ಆರ್ ಉಪಾಧ್ಯಾಯ ಮತ್ತು ಯುವಾ ಬ್ರಿಗೇಡ್ ನ ಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರು ಹಾಜರಿರಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮಕ್ಕೆ ಕುಮಟಾದ ಸಮಸ್ತರೂ ಹಾಜರಿರಲು ವಿನಂತಿಸಿದರು.

RELATED ARTICLES  ಕುಮಟಾ ಹೊನ್ನಾವರದಲ್ಲಿ ಕೊರೋನಾ ಆರ್ಭಟ

ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕರಾದ ಸತೀಶ ಪಟಗಾರ, ತಾಲೂಕ ಸಂಚಾಲಕರಾದ ಪ್ರಕಾಶ ನಾಯ್ಕ ಕಾರ್ಯಕರ್ತರಾದ ಲಕ್ಷ್ಮಿಕಾಂತ ಮುಕ್ರಿ, ಗೌರೀಶ ನಾಯ್ಕ, ಸಚೀನ್ ಭಂಡಾರಿ, ಸಂದೀಪ ಮಡಿವಾಳ, ರವೀಶ ನಾಯ್ಕ ಹಾಜರಿದ್ದರು.