ದಾಂಡೇಲಿ: ನಗರದ ಯುವಕರು ಸೇರಿ ಅಭ್ಯಂತಾ ಯೂತ್ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಿಸಿದ ಸೂಸೈಡ್ ದಿ ಲಾಸ್ಟ್ ಅಟೆಂಪ್ಟ್ ಕಿರುಚಿತ್ರವು ಬ್ಯಾಂಕಕ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಮಾಜಿಕ ಸಂದೇಶ ಸಾರುವ ಚಿತ್ರ ಎಂಬ ಪ್ರಶಸ್ತಿಗೆ ಆಯ್ಕೆಯಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಮಾರುತಿ ನಗರದ ಕ್ರಿಯಾಶೀಲ ಯುವಕ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಮನೋಹರ್ ಎಂ.ಕಾಂಬಳೆಯವರ ಕಥೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನೊಂದಿಗೆ ನಿರ್ಮಿಸಲಾದ ಈ ಚಿತ್ರದಲ್ಲಿ ಕಲಾವಿದರುಗಳಾಗಿ ನಗರದ ಯುವಕರುಗಳಾದ ಚಂದ್ರಕಾಂತ ಗಾಡಿವಡ್ಡರ್, ಭೀಮರಾಜ್ ವಡ್ಡರ್, ಮುತ್ತುರಾಜ ಯಲಬುರ್ಗಿ, ಶಿವಾಜಿ ಡೊಯಪೊಡೆ, ಪರಶುರಾಮ ಹರಿಜನ, ನವರಾಜ್, ಯುವರಾಜ್, ಪ್ರತಾಪ್ ಮತ್ತು ಬಾಲ ಕಲಾವಿದರುಗಳಾಗಿ ಗೌತಮ್ ಹಾಗೂ ಸ್ನೇಹ ಮತ್ತು ಅತಿಥಿ ಕಲಾವಿದರುಗಳಾಗಿ ಎಎಸೈ ಮೆಹಬೂಬು ಲಿಂಬುವಾಲೆ, ಪೊಲೀಸ್ ಸಿಬ್ಬಂದಿ ಭೀಮುಶಿ ಮತ್ತು ಪೂಜಾ ನಾಯ್ಕ ಅವರು ಅತ್ಯುತ್ತಮ ಅಭಿನಯ ನೀಡಿದ್ದಾರೆ. ಈ ಹಿಂದೆ ಗೋವಾದಲ್ಲಿ ನಡೆದ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಈ ಕಿರುಚಿತ್ರವು ಪಡೆದುಕೊಂಡಿತ್ತು.

RELATED ARTICLES  ಗೋಕರ್ಣ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವೀಕ್ಷಿಸಿದ‌ ಮಾಜಿ ಶಾಸಕಿ: ಶಾರದಾ ಶೆಟ್ಟಿಯವರ ಕಾರ್ಯಕ್ಷಮತೆ‌ ಮೆಚ್ಚಿದ ಜನತೆ.