ಕುಮಟಾ: ವಿದ್ಯಾರ್ಥಿಗಳು ಒದಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮಾತು ಮತ್ತು ಬರವಣ ಗೆಯಲ್ಲಿ ಪಳಗಬೇಕು ಎಂದು ಡಿ.ಡಿ.ಪಿ.ಆಯ್ ಈಶ್ವರ ನಾಯ್ಕ ನುಡಿದರು. ಅವರು ಕರ್ನಾಟಕ ರಾಜ್ಯ ಬೋಧಕರ ಸಂಘವು “ಸ್ವಾತಂತ್ರ್ಯ ದ ಅಮೃತ ಮಹೋತ್ಸವ”ದ ಪ್ರಯುಕ್ತ ಉತ್ತರಕನ್ನಡ ಶೈಕ್ಷಣ ಕ ಜಿಲ್ಲೆಯ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ನನ್ನ ಭಾರತ -ನನ್ನ ಹೆಮ್ಮೆ” ಎಂಬ ವಿಷಯದ ಕುರಿತಾದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ನೆಲ್ಲಿಕೇರಿಯ ಪ್ರೌಢ ಶಾಲೆಯ ಸಭಾ ಭವನದಲ್ಲಿ ಬಹುಮಾನವನ್ನು ವಿತರಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಬೋಧಕರ ಸಂಘವು ಅಸ್ತಿತ್ವಕ್ಕೆ ಬಂದ ಅತ್ಯಲ್ಪಾವಧಿಯಲ್ಲಿ ವೃತ್ತಿಪರ ಹಿತಾಸಕ್ತಿಯೊಂದಿಗೆ ವಿದ್ಯಾರ್ಥಿಗಳ ಶೈಕ್ಷಣ ಕ ಪ್ರಗತಿಗೆ ಪೂರಕವಾದ ಹಲವಾರು ರಚನಾತ್ಮಕವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುತ್ತಾ ಇತರೇ ಸಂಘಟನೆಗಳಿಗೆ ಮಾದರಿಯಾಗಿದೆಯೆಂದರು.


ಬಹುಮಾನದ ಪ್ರಯೋಜಕತ್ವವನ್ನು ವಹಿಸಿದ್ದ ತೊರ್ಕೆಯಕವರಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಆನಂದು ಕವರಿಯವರು ತಮ್ಮ ಜೀವಿತದುದ್ದಕ್ಕೂ ಶೈಕ್ಷಣ ಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿರುತ್ತೇನೆಎಂದರಲ್ಲದೇ ಸರ್ಕಾರಿ ಶಾಲೆಗಳ ಉಳುವಿಗೆ ಪ್ರಾಮಾಣಿಕವಾಗಿ ಎಲ್ಲರೂ ಪ್ರಯತ್ನಿಸುವ ಅಗತ್ಯವಿದೆಯೆಂದರು.

RELATED ARTICLES  ಶಾ ನಡೆಸಲಿದ್ದಾರೆ ಸರ್ಜಿಕಲ್ ಸ್ಟ್ರೈಕ್? ಅನಂತ್ ಕುಮಾರ ಹೆಗಡೆ ಮುಖ್ಯಮಂತ್ರಿ ಅಭ್ಯರ್ಥಿ?


ಅಭ್ಯಾಗತರಾದ ಡಯಟ್ ಉಪಪ್ರಾಚಾರ್ಯ ಜಿ.ಎಸ್.ಭಟ್ಟರವರು ಮಾತನ್ನಾಡಿ “ನನ್ನ ಭಾರತ-ನನ್ನ ಹೆಮ್ಮೆ” ಎಂಬುದು ಅತ್ಯಂತ ಆಪ್ತವಾದ ಸರ್ವಕಾಲೀನವಾದ ವಿಷಯವಾಗಿದ್ದು, ದೇಶದ ಕುರಿತು ಅಭಿಮಾನವನ್ನು ಅಭಿಪ್ರೇರೇಪಿಸಲು ಪೂರಕವಾಗಿರುದರಿಂದ ಸಂಘಟಕರು ಅಭಿನಂದನಾರ್ಹರೆಂದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟರವರು ಮಾತನಾಡುತ್ತಾ ಚಿಂತನ ಮಂಥನಗೈದು ಪರಿಣಾಮಕಾರಿಯಾಗಿ ಆಕಾರಗೊಳಿಸಿದ ಎಲ್ಲಾ ಪ್ರಬಂಧಗಳನ್ನು ಸಮ್ಮಿಕರಿಸಿ ಹೊತ್ತಿಗೆಯೊಂದನ್ನು ತಂದರೆ ಆಕರಗ್ರಂಥವಾಗಿ ಉಳಿಯಲು ಸಾಧ್ಯವೆಂದರು.
ಕ್ಷೇತ್ರ ಸಮನ್ವಯಾಧಿಕಾರಿ ರೇಖಾ ನಾಯ್ಕರವರು ಕರ್ನಾಟಕರಾಜ್ಯ ಬೋಧಕರ ಸಂಘದ ಪದಾಧಿಕಾರಿಗಳು ಶ್ವೇತವಸ್ತçಧಾರಿಗಳಾಗಿ ಸಮ್ಮೋಹಕಗಿದ್ದರಲ್ಲದೇ, ತಮ್ಮ ಕಾರ್ಯವೈಖರಿಯ ಮೂಲಕವೂ ಶುಭ್ರವಾಗಿದ್ದಾರೆಯೆಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ್ ಬರ್ಗಿಯವರು ಮಾತನ್ನಾಡಿ, ಅಭಿಮಾನವು ಅಂತರAಗದ ವಿಷಯವಾಗಿದ್ದು, ಸಂಸ್ಕಾರದ ಕೈಗನ್ನಡಿಯಾಗಿರುವುದರಿಂದ, ವಿದ್ಯಾರ್ಥಿಗಳ ಸಾಕ್ಷö್ಯ ಪ್ರಜ್ಞೆಯ ಸಂಕೇತವಾಗಿ ಅವರವರ ಮಿತಿಯಲ್ಲಿ ರೂಪುಗೊಂಡು ಪ್ರಬಂಧಗಳಲ್ಲಿ ಉತ್ತಮಗೊಂಡವು ಬಹುಮಾನಕ್ಕೆ ಆಯ್ಕೆಯಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸದವರೆಲ್ಲರೂ ಅಭಿನಂದನಾರ್ಹರೆಂದರು.

RELATED ARTICLES  ಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ : ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ


ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದ ಹೊನ್ನಾವರದ ನ್ಯೂಇಂಗ್ಲೀಷ್ ಸ್ಕೂಲಿನ ವಿದ್ಯಾರ್ಥಿನಿ ಕಾಂತಿ ಶಂಕರ ಹೆಗಡೆ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ-ಅಮ್ಮನ ಪ್ರೇರಣೆಯಿಂದ “ನನ್ನಅಮ್ಮ-ನನ್ನ ಹೆಮ್ಮೆ” ಎಂದುಕೊಂಡರೆ, ನನ್ನ ಅಮ್ಮನೂ “ನನ್ನ ಮಗಳು-ನನ್ನ ಹೆಮ್ಮೆ “ ಎಂದುಕೊಂಡಿದ್ದು, ಇಂತಹ ಗುಣಾತ್ಮಕವಾದ ಕಾರ್ಯಕ್ರಮವನ್ನು ಸಂಘಟಿಸಿದ “ಬೋಧಕರ ಸಂಘವು ನಮ್ಮೆಲ್ಲರ ಹೆಮ್ಮೆ” ಎಂದು ಮುದ್ದು ಮುದ್ದಾಗಿ ಸೊಗಸಾಗಿ ನುಡಿದಿದ್ದಲ್ಲದೇ, ಮಹಾಗಣಪತಿಯನ್ನು ಮೊದಲಿಗೆ ಸ್ಮರಿಸಿ ಬರೆದಿದ್ದರಿಂದ ತನಗೆ ಪ್ರಥಮ ಬಹುಮಾನವು ಬಂತೆಂದು ಭಾವಪರವಶರಾಗಿ ನುಡಿದರು.
ಎನ್.ಬಿ ನಾಯಕ ಸೂರ್ವೆ ಸ್ವಾಗತಿಸಿದರು, ಉಪಾಧ್ಯಕ್ಷಎಚ್.ಬಿ.ರಾವೂತ್ ವಂದಿಸಿದರು ಸಂಚಾಲಕ ವಿಜಯಕುಮಾರ್ ನಾಯ್ಕ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಪೈ ಖಚಾಂಚಿ ಶಿವಚಂದ್ರ, ಬಾಲಚಂದ್ರಗಾಂವಕರ್, ಜಿ.ಎಸ್.ಗಾಂವಕರ್. ಆರ್.ಜೆ.ನಾಯ್ಕ, ಕಣ್ಮಣಿ ಮೊದಲಾದವರಿದ್ದರು.