ಕುಮಟಾ : ತಾಲೂಕಿನ ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವು ಕೋನಳ್ಳಿಯ ವನದುರ್ಗ ಸಭಾಭವನದಲ್ಲಿ ಫೆಬ್ರವರಿ 28 ರಂದು ನಡೆಸಲಾಗುವುದು ಎಂದು ಪರಿಷತ್ತಿನ ಅಧ್ಯಕ್ಷರಾದ ಸುಬ್ಬಯ್ಯ ನಾಯ್ಕ ತಿಳಿಸಿದ್ದಾರೆ. ಸ್ವಾಗತ ಸಮಿತಿಯ ಅಧ್ಯಕ್ಷರಾದ ಶಾಸಕ ದಿನಕರ ಕೆ. ಶೆಟ್ಟಿಯವರನ್ನು ಭೇಟಿ ಮಾಡಿ ಪರಿಷತ್ತಿನ ಪದಾಧಿಕಾರಿಗಳು ಅವರೊಂದಿಗೆ ಚರ್ಚಿಸಿದರು. ಸಮ್ಮೇಳನದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು. ತಾಲೂಕಾ ಮಟ್ಟದ ಎಲ್ಲಾ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಸಮ್ಮೇಳನದ ಯಶಸ್ವಿಗೆ ಅವರ ಅಭಿಪ್ರಾಯ ಕೇಳಿ ಜವಾಬ್ದಾರಿ ಹಂಚಲಾಗುವುದು ಎಂದು ಪರಿಷತ್ತಿನ ಪದಾಧಿಕಾರಿಗಳಿಗೆ ಭರವಸೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ, ಕೊನಳ್ಳಿಯಲ್ಲಿ ನಡೆಯುವ ಒಂದು ದಿನದ ಸಾಹಿತ್ಯ ಸಮ್ಮೇಳನದ ಸಂಕ್ಷಿಪ್ತ ಮಾಹಿತಿ ನೀಡಿದರು.

RELATED ARTICLES  ಚಿತ್ರಿಗಿ ಪ್ರೌಢಶಾಲೆಗೆ ನೋನಿ ಟೂತ್ ಪೇಸ್ಟ್ ವಿತರಣೆ


ಸಭೆಯಲ್ಲಿ ಸಾಹಿತಿ ಬೀರಣ್ಣ ನಾಯಕ, ಎನ್. ಆರ್. ಗಜು ಪರಿಷತ್ತಿನ ಪದಾಧಿಕಾರಿಗಳಾದ ಪ್ರಮೋದ್ ನಾಯ್ಕ, ಪ್ರದೀಪ ನಾಯಕ, ಗಿರೀಶ್ ವನ್ನಳ್ಳಿ, ಯೋಗೇಶ್ ಪಟಗಾರ, ಸುರೇಶ ಭಟ್ಟ, ನಾಗರಾಜ ಶೆಟ್ಟಿ, ಪ್ರಕಾಶ ನಾಯ್ಕ, ರಾಜು ಕೌರಿ, ಎಂ.ಎಂ. ಚಂದಾವರಕರ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ರಾತ್ರಿ ವೇಳೆ ಅಪರಿಚಿತ ವ್ಯಕ್ತಿ ಓಡಾಟ : ಭಯದಲ್ಲಿ ಜನತೆ