ದಾಂಡೇಲಿ: ನಗರದ ಕುಳಗಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗರಾಟ ಆಡಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಮಟ್ಕಾ ಜುಗರಾಟಕ್ಕೆ ಬಳಸುತ್ತಿದ್ದ ನಗದನ್ನು ವಶಪಡಿಸಿಕೊಂಡ ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಸುಭಾಸನಗರದ ನಿವಾಸಿ ಜೈನುಲ್ಲಾ ಅಬಿದ್ದೀನ್ ಅಬ್ದುಲ್ ಗಣಿ ಯಲ್ಲೂರ ಎಂಬಾತನು ಕುಳಗಿ ರಸ್ತೆಯ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತಮ್ಮ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ ಒಂದು ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ ಸಂಖ್ಯೆ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ, ಮಟ್ಕಾ ಜುಗಾರಾಟ ಆಡಿಸುತ್ತಿದ್ದನು. ಈ ಸಂದರ್ಭದಲ್ಲಿ ದಾಂಡೇಲಿ ನಗರ ಪೊಲೀಸರು ದಾಳಿ ನಡೆಸಿ ಮಟ್ಕಾ ಬರೆದಿರುವ ಚೀಟಿ ಹಾಗೂ ನಗದು ರೂ.2200/- ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಕಲಂ 78(3)ರ ಕೆ.ಪಿ.ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸೈ ಐ.ಆರ್.ಗಡ್ಡೇಕರ್ ಅವರು ದಾಳಿ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES  ಚಂದಾವರದಲ್ಲಿ ಹೊನಲು ಬೆಳಕಿನ ಪ್ಲಾಸ್ಟಿಕ್ ವಾಲಿಬಾಲ್ ಪಂದ್ಯಾವಳಿ : ಕಾರ್ಯಕ್ರಮ ಉದ್ಘಾಟಿಸಿದ ರವಿಕುಮಾರ ಶೆಟ್ಟಿ.