ದಾಂಡೇಲಿ: ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಮಾಲು ಸಹಿತ ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ ಘಟನೆ ಅನಮೋಡ ಅಬಕಾರಿ ತನಿಖಾ ಠಾಣೆಯ ಹತ್ತಿರ ನಡೆದಿದೆ ಎಂಬ ಮಾಹಿತಿ ನಗರದ ಅಬಕಾರಿ ಇಲಾಖೆಯಿಂದ ಲಭ್ಯವಾಗಿದೆ. ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಿಕೊಂಡು ಬರುತ್ತಿದ್ದ ಕೆಎ:25, ಎಬಿ:2863 ಸಂಖ್ಯೆಯ ಸ್ವಿಪ್ಟ್ ಡಿಸೈರ್ ವಾಹನವನ್ನು ಖಚಿತ ಮಾಹಿತಿಯನ್ನಾಧರಿಸಿ ಅನಮೋಡ ಅಬಕಾರಿ ತನಿಖಾ ಠಾಣೆಯ ಹತ್ತಿರ ಅಬಕಾರಿ ರಕ್ಷಕರಾದ ಉಳುವೇಶ್ ಅವರು ಪರಿಶೀಲನೆ ನಡೆಸಿದಾಗ ಅಕ್ರಮ ಮದ್ಯ ಸಾಗಾಟ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ವಾಹನದಲ್ಲಿದ್ದ 750 ಮಿಲಿಯ ಓಲ್ಡ್ ಬಿಲ್ ಎಕ್ಸ್ಟ್ರಾ ಸ್ಪೇಷಲ್ ವಿಸ್ಕಿಯ 100 ಪ್ಲಾಸ್ಟಿಕ್ ಬಾಟಲಿಗಳು ಪತ್ತೆಯಾಗಿದೆ. ತಕ್ಷಣವೆ ಅಕ್ರಮ ಗೋವಾ ಮದ್ಯ ಹಾಗೂ ವಾಹನವನ್ನು ವಶಪಡಿಸಿಕೊಂಡು, ಕಾರಿನಲ್ಲಿದ್ದ ಅಮಿತ್ ಚೇತನ್ ಸಾಂಗ್ಲಿಕರ ಈತನನ್ನು ಬಂಧಿಸಲಾಗಿದೆ. ವಾಹನ ಚಾಲಕ ಪರಾರಿಯಾಗಿದ್ದಾನೆ.

RELATED ARTICLES  ಗಮನ ಸೆಳೆದ ಅಘನಾಶಿನಿ‌ ಆರತಿ ವಿಶೇಷ ಕಾರ್ಯಕ್ರಮ.


ಅಬಕಾರಿ ಇಲಾಖೆ ನೀಡಿದ ಪ್ರಕಟಣೆಯಲ್ಲಿ ಈ ಕರ‍್ಯಾಚರಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ವನಜಾಕ್ಷಿ ಎಂ. ಅವರ ನಿರ್ದೇಶನದ ಮೇರೆಗೆ ಅಬಕಾರಿ ಉಪಾಧೀಕ್ಷಕರಾದ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರಾದ ಗಣೇಶ್ ನಾಯ್ಕ, ಅಬಕಾರಿ ಉಪ ನಿರೀಕ್ಷಕರುಗಳಾದ ಮಂಜುನಾಥ್ ಜೋಗಳೇಕರ್ ಮತ್ತು ಶ್ರೀಕಾಂತ.ಬಿ.ಅಸೋದೆ ಹಾಗೂ ಸಿಬ್ಬಂದಿಗಳಾದ ಸಿ.ಪಿ.ರಾಥೋಡ್, ಪ್ರಸನ್ನ ನೇತ್ರೇಕರ್ ಮತ್ತು ಧ್ರುವರಾಜ್ ಅವರು ಕರ‍್ಯಾಚರಣೆಯಲ್ಲಿ ಭಾಗವಹಿಸಿದ್ದರು 

RELATED ARTICLES  ಮತ್ತೆ ಮುಂದುವರಿದ ಪೊಲೀಸ್ ಕಾರ್ಯಾಚರಣೆ : ಶಿರಸಿಯಲ್ಲಿ ಮೂವರು ಅರೆಸ್ಟ್..!