ಶಿರಸಿ: ನಗರದ ಸಬ್ ಜೈಲಿನಲ್ಲಿ ಡಕಾಯಿತಿ ಪ್ರಕರಣದಲ್ಲಿ ವಿಚಾರಣಾಧೀನನಾಗಿದ್ದ ಖೈದಿಯೋರ್ವ ಶನಿವಾರ ಬೆಳಿಗ್ಗೆ 8.45ರ ಸುಮಾರಿಗೆ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ನಡೆದಿತ್ತು. ಮೂಲತಃ ಯಲ್ಲಾಪುರ ತಾಲೂಕಿನ ಜಡಹಲಗಿನ ಕೊಪ್ಪ ಗ್ರಾಮದ ನಿವಾಸಿಯಾಗಿದ್ದ ಪ್ರಕಾಶ್ ಕೃಷ್ಣ ಸಿದ್ದಿ ಎಂಬಾತ ಬಿಳಕಿ ಗ್ರಾಮದಲ್ಲಿ ನಡೆದ ಡಕಾಯಿತಿ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿದ್ದು, ಪರಾರಿಯಾದ ಈತನಿಗಾಗಿ‌ ಶಿರಸಿ ಪೋಲೀಸರು ಬಲೆ ಬೀಸಿ ಕೆಲವೇ ಘಂಟೆಗಲ್ಲಿ ಆತನ ಹೆಡೆಮುರಿ ಕಟ್ಟಿದ್ದಾರೆ.

ಕಪ್ಪು ಅರಿಶಿಣ ಪ್ರಕರಣದಲ್ಲಿ ವ್ಯಕ್ತಿಯೋರ್ವರಿಂದ
ಸುಮಾರು 14 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ಈತನನ್ನು ಬಂಧಿಸಿ, ಉಪ ಬಂಧಿಖಾನೆಯಲ್ಲಿ ಸೆರೆ ಹಾಕಿದ್ದರು ಬಂದಿಖಾನೆಯ ಸಿಬ್ಬಂದಿ ಕೊಟ್ಟ ಕೆಲಸವನ್ನು ಚಾಚೂ ತಪ್ಪದೇ ಮಾಡುತ್ತಿದ್ದ ಆರೋಪಿಯು, ಎಲ್ಲರ ಸ್ನೇಹಗಳಿಸಿದ್ದ. ಈ ಸ್ನೇಹವೇ ಬಂಧಿಖಾನೆಯ ಪೊಲೀಸ್ ಸಿಬ್ಬಂದಿಗಳಿಗೆ ಮುಳುವಾಗಿದ್ದು, ಶನಿವಾರ ಬೆಳಿಗ್ಗೆ ಬಂಧಿಖಾನೆ ಸ್ವಚ್ಛತೆಯ ನೆಪದಲ್ಲಿ ಸುಲಭವಾಗಿ ಪರಾರಿಯಾಗಿದ್ದಾನೆ.

RELATED ARTICLES  ಅರಣ್ಯವಾಸಿಗಳಿಗೆ ಸಾಗುವಳಿಗಾಗಿ ಹಾಗೂ ವಾಸ್ತವ್ಯಕ್ಕಾಗಿ ಹಕ್ಕನ್ನು ನೀಡುವ ಕುರಿತು ಜು.21 ರಂದು ಉರುಳು ಸೇವೆ.

ಸುದ್ದಿ ತಿಳಿದ ಡಿವೈಎಸ್ಪಿ ಗಣೇಶ ಕೆ.ಎಲ್. ಬಂಧಿಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್‌ಪಿ ನೇತ್ರತ್ವದಲ್ಲಿ ಐದು ತಂಡ ರಚಿಸಿ ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದರು. ಇದರ ನಡುವೆ ಆರೋಪಿ ತಪ್ಪಿಸಿಕೊಳ್ಳಲು ಕಾರಣೀಕರ್ತರಾದ ಸಿಬ್ಬಂದಿಯ ವಿಚಾರಣೆಗೂ ಸೂಚಿಸಿದ್ದರು. ಆರೋಪಿ ಬೆಳಿಗ್ಗೆ ತಪ್ಪಿಸಿಕೊಂಡು ಓಡಿ ಓಡಿ ಹಾರೆಪಾಲ್ ಬಳಿ‌ ಸುಸ್ತಾಗಿ ಕುಳಿತುಕೊಂಡಿದ್ದ. ಈ ನಡುವೆ ಆರೋಪಿ ತಪ್ಪಿಸಿಕೊಂಡಿದ್ದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿದ್ದ ಹಾರೆಪಾಲಿನ ಶ್ರೀಧರ ಹೆಗಡೆ ಎಂಬುವವರು ಆರೋಪಿಯನ್ನು ವಿಚಾರಿಸಿದ್ದಾರೆ. ಆರೋಪಿಯು ಮೊದಲಿಗೆ ಇಲ್ಲವೆಂದು ಹೇಳಿದನಾದರೂ ಕೊನೆಯಲ್ಲಿ ತಾನೇ ಆ ತಪ್ಪಿಸಿಕೊಂಡವನು ಎಂದು ಒಪ್ಪಿಕೊಂಡಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಗ್ರಾಮೀಣ ಠಾಣೆಯ ಸಿಪಿಐ ಸೀತಾರಾಮ್ ನೇತ್ರತ್ವದ ತಂಡವು ಚುರುಕಿನ ಕಾರ್ಯಾಚರಣೆ ನಡೆಸಿ ಸಂಜೆಯ ಹೊತ್ತಿಗೆ
ಹಾರೆಪಾಲ್ ಬಳಿ ಆರೋಪಿಯನ್ನ ಪುನಃ ಬಂಧಿಸುವಲ್ಲಿ
ಯಶಸ್ವಿಯಾಗಿದ್ದಾರೆ.

RELATED ARTICLES  ಹೆಬಳೆಯ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಧನ‌ಸಹಾಯ ಮಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ