ಜೊಯಿಡಾ: ಟ್ಯಾಕ್ಟರ್ ಡಿಕ್ಕಿ ಹೊಡೆದು ಒರ್ವ ಸಾವು ಕಂಡ ಘಟನೆ ಬರ್ಚಿ-ಗಣೇಶಗುಡಿ ರಸ್ತೆಯ ಗ್ರೀನ್ ಮಿಸ್ಟ ಹೋಂ ಸ್ಟೇ ಬಳಿ ನಡೆದಿದೆ. ಗುರುವಾರ ಮಧ್ಯಾಹ್ನ 2 ಘಂಟೆ ಸುಮಾರಿಗೆ ಯುವರಾಜ ಮತ್ತು ಆತನ ಸ್ನೇಹಿತರಾದ ಆನಂದ ಭೋವಿವಡ್ಡರ್ ಚಂದ್ರಕಾಂತ ಥೋರವತ ಟ್ಯಾಕ್ಟರಿನಲ್ಲಿ ಹೋಗುತ್ತಿದ್ದು, ಕಚ್ಚಾ ರಸ್ತೆ ಬಂದ ಬಳಿಕ ಚಂದ್ರಕಾಂತ ಥೋರವತ ದಾರಿ ತೋರಿಸಲು ಟ್ಯಾಕ್ಟರ್ ಮುಂದೆ ಹೋಗುತ್ತಿರುವಾಗ ಆನಂದ ಟ್ಯಾಕ್ಷತ್ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡು ವೇಗವಾಗಿ ಮುಂದೆ ಹೋಗುತ್ತಿದ್ದ ಚಂದ್ರಕಾಂತ ಥೋರವತನಿಗೆ ಡಿಕ್ಕಿ ಹೊಡೆದುದರಿಂದ ಆತ ಸ್ಥಳದಲ್ಲಿಯೇ ಸಾವು ಕಂಡಿದ್ದಾನೆ. ಈ ಕುರಿತು ದೂರು ದಾಖಲಾಗಿದೆ.