ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೊಲಾದ ಅಂಬಾರಕೊಡ್ಲನಲ್ಲಿ ದೈವನರ್ತಕ ತನ್ನ ಸ್ವಾರ್ಥಕ್ಕಾಗಿ ವಿವಾಹಿತ ಮಹಿಳೆಯೊಬ್ಬಳಿಗೆ ದೈವದ ಹೆಸರಿನಲ್ಲಿ ತಾನೇ ಮದುವೆಯಾಗುವ ಅಭಯ ನೀಡಿದ ಪ್ರಕರಣವೀಗ ಜನರ ತೀವ್ರ ವಿರೋಧದ ನಂತರ ಮತ್ತೊಂದು ತಿರುವು ಪಡೆದುಕೊಂಡಿದೆ. ದೈವನರ್ತಕರೊಬ್ಬರು ವಿವಾಹಿತ ಮಹಿಳೆಯೊಬ್ಬರಿಗೆ ದೈವದ ಹೆಸರಿನಲ್ಲಿ ಮದುವೆಯಾಗುವ ಅಭಯ ನೀಡಿ ವಿವಾದಕ್ಕೆ ಕಾರಣವಾಗಿದ್ದಾರೆ. ಬದುಕಿನ ಕಷ್ಟ ಹೇಳಿಕೊಳ್ಳಲು ಬಂದ ಬೆಳಗಾವಿ ಮೂಲದ ಮಹಿಳೆಗೆ ಅಂಬಾರಕೊಡ್ಲ ಗ್ರಾಮದ ದೈವನರ್ತಕ ಚಂದ್ರಹಾಸ, ತುಂಬಿದ ಸಭೆಯಲ್ಲಿ ಮದ್ವೆ ಮಾಡಿಕೊಳ್ಳುವ ಮಾತಾಡಿರೋದು ವಿವಾದಕ್ಕೆ ಕಾರಣವಾಗಿದೆ.
ದೈವದ ಹೆಸರಿನಲ್ಲಿ ವಿವಾಹಿತ ಮಹಿಳೆಗೆ ತಾನೇ ಮದುವೆಯಾಗುವ ಅಭಯ ನೀಡಿ ವಿವಾದಕ್ಕೆ ಜನರ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಅಂಕೋಲಾದ ಅಂಬಾರಕೊಡ್ಲನಲ್ಲಿನ ತನ್ನ ನಿವಾಸದಿಂದ ದೈವ ನರ್ತಕ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವರದಿ ಹರಿದಾಡುತ್ತಿದೆ. ಕೆಂಡದಮಾಸ್ತಿ ದುರ್ಗಾ ದೇವಸ್ಥಾನ ಖಾಲಿ ಹೊಡೆಯುತ್ತಿದ್ದು, ಸಹೋದರ ಹಾಗೂ ಆತನ ತಾಯಿ ಮಾತ್ರ ಸ್ಥಳದಲ್ಲಿದ್ದರು. ಈತ ಬೆಳಗಾವಿ ಮೂಲದ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂಬ ಸುದ್ದಿ ಹರಡುತ್ತಿದೆ. ಈ ಕುರಿತು ಮಾದ್ಯಮ ದವರು ಸ್ಥಳಕ್ಕೆ ಹೋಗಿ ವಿಚಾರಿಸಿದ್ರೆ ಆತನ ಕುಟುಂಬಸ್ಥರು ಹೇಳೋದೆ ಬೇರೆ.
ಒಂದೆಡೆ ದೈವ ನರ್ತಕನ ಮಾತುಗಳು ಸಾಕಷ್ಟು ಅನುಮಾನ ಸೃಷ್ಟಿಸಿದೆ. ಇತ್ತ ದೈವ ನರ್ತನನಿಂದ ಅಭಯ ಪಡೆದ ಬೆಳಗಾವಿಯ ವಿವಾಹಿತ ಮಹಿಳೆ ಸಹ ನಾಪತ್ತೆಯಾಗಿದ್ದಾಳೆ. ದೈವ ನರ್ತಕ ಚಂದ್ರಹಾಸನಿಗೆ ಪತ್ನಿ ಹಾಗೂ ಓರ್ವ ಮಗಳು ಸಹ ಇದ್ದಾರೆ. ಆದರೆ ಅವರು ದೂರವಿದ್ದಾರೆ. ಇವರು ದೈವ ನರ್ತನದ ವೇಳೆ ಹೇಳಿದಂತೆ ವಿವಾಹವಾಗಿದ್ದಾರೆ ಎಂಬ ಸುದ್ದಿ ಸಹ ಇದೆ. ಆದರೆ ಇದ್ಯಾವುದಕ್ಕೂ ಸ್ಪಷ್ಟ ಉತ್ತರ ಅವರ ಕುಟುಂಬದವರು ಸ್ಪಷ್ಟನೆ ನೀಡಲು ಸಿದ್ಧರಿಲ್ಲ. ಇನ್ನು ದೈವನರ್ತಕನ ವಿರುದ್ಧ ಜನಶಕ್ತಿ ವೇದಿಕೆ ವಂಚನೆ ಪ್ರಕರಣ ದಾಖಲಿಸಲು ಮುಂದಾಗಿದೆ.
ಸದ್ಯಕ್ಕಂತೂ ದೈವ ನರ್ತಕನ ವಿವಾಹಿತ ಮಹಿಳೆಗೆ ನೀಡಿದ ಅಭಯ ದೊಡ್ಡ ಸದ್ದು ಮಾಡುತ್ತಿದ್ದು ಜನರ ಆಕ್ರೋಶ ಹೆಚ್ಚಾಗಿದೆ. ಇವೆಲ್ಲವುದಕ್ಕೆ ತೆರೆಎಳೆಯಬೇಕು ಎಂದರೆ ದೈವನರ್ತಕನ ಪತ್ನಿ ಹಾಗೂ ಆತನೇ ಸ್ಪಷ್ಟನೆ ನೀಡಿ ಈ ಪ್ರಕರಣಕ್ಕೆ ತೆರೆಎಳೆಯಬೇಕಿದೆ.