ಕುಮಟಾ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ವಿದ್ಯಾಗಿರಿಯ ಮೈದಾನದಲ್ಲಿ ದಿನಾಂಕ 4/02/2023 ರ ಶನಿವಾರ ಹಾಗೂ 5/02/2023 ರ ರವಿವಾರದ ದಂದು ಜರುಗಿದ ಉತ್ತರಕನ್ನಡ ಜಿಲ್ಲಾ ದೇಶಭಂಡಾರಿ ಯುವ ಕ್ರೀಡಾಭಿಮಾನಿಗಳ ಬಳಗ ಒಕ್ಕೂಟ ಕುಮಟಾದ ವತಿಯಿಂದ ಸಮಾಜ ಬಾಂಧವರಿಗಾಗಿ ಜರುಗಿದ ನಿಗದಿತ ಓವರ್ ಗಳ ಕ್ರಿಕೇಟ ಪಂದ್ಯದಲ್ಲಿ ಕಾರವಾರದ ಶಜೇಶ್ವರ ತಂಡವು ಶಾಂತಿಕಾ ಇಲೆವೆನ್ ಕುಮಟಾದ ತಂಡದ ವಿರುದ್ದ 59 ರನ್ ಗಳಿಸಿ ಅಂತಿಮ ಪಂದ್ಯವನ್ನು ಜಯಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.ಟಾಸ್ ಗೆದ್ದ ಶಾಂತಿಕಾ ತಂಡವು ಎಂಟು ಓವರನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 58 ರನ್ ಗಳಿಸಿತ್ತು . ಈ ಮೊತ್ತವನ್ನು ಬೆನ್ನಟ್ಟಿದ ಶೆಜೇಶ್ವರಿ ತಂಡವರು ಐದು ಓವರ ನಲ್ಲಿ ಒಂದು ವಿಕೇಟ್ ಕಳೆದು ಕೊಂಡು ವಿಜಯದ ಮೊತ್ತ ದಾಖಲಿಸಿದರು.
ಶೆಜೇಶ್ವರ ತಂಡದ ಸಮೀರ್ ನಾಯ್ಕ ಮ್ಯಾನ್ ಆಫ್ ದ ಮ್ಯಾಚ್ ಆದರು. ಸೋಹನ್ ಕಾರವಾರ ಸರಣಿ ಶ್ರೇಷ್ಠಶ್ರೇಷ್ಠ ಎನಿಸಿದರು.ಜಿಲ್ಲೆಯ ವಿವಿಧ ತಾಲೂಕುಗಳಿಂದ ಹದಿನಾರು ತಂಡಗಳು ಪಾಲ್ಗೊಂಡಿದ್ದವು. ಶ್ರೀಧರ ಬೀರಕೋಡಿ,ಅರುಣ ಮಣಕೀಕರ್ . ಕಾಗಾಲ ಚಿದಾನಂದ ಭಂಡಾರಿ ,ಡಾಕ್ಟರ್ ಜಗದೀಶ ನಾಯ್ಕ,ಅಚ್ಚುತ ಮುಕುಂದ ಅಡ್ಪೇಕರ್ ಶ್ರೀಮತಿ ಸೂಷ್ಮಾ ಗಾಂವ್ಕರ್,ಮಹೇಶ ದೇಶಭಂಡಾರಿ ಮಲ್ಲಿಕಾರ್ಜುನ ,ಕಿರಣ ಭಂಡಾರಿ ಡಾಕ್ಟರ್ ಸುಮಲತಾ ,ಪ್ರಣವ್ ಮಣಕೀಕರ್ ಮುಂತಾದ ದೇಶ ಭಂಡಾರಿ ಸಮಾಜದ ಗಣ್ಯರು ಪ್ರಶಸ್ತಿ ಪುರಸ್ಕಾರಗಳನ್ನು ವಿತರಿಸಿದರು.ಸತೀಶ ಭಂಡಾರಿ ಶಿಕ್ಷಕ ಗೌರೀಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.