ಭಟ್ಕಳ: ಮನೆಯ ಎದುರಿಗೆ ನಿಲ್ಲಿಸಿದ್ದ ಕೊಹಿಲಾ ಮಾಲೀಕತ್ವದ ಜನರೇಟರ್‌ಗೆ ಚಲಿಸುತ್ತಿದ್ದ ಪಲ್ಸರ್ ಬೈಕ್ ಸವಾರ ಡಿಕ್ಕಿ ಹೊಡೆದು ಪರಿಣಾಮ ಸ್ಥಳದಲ್ಲಿ ಮೃತಪಟ್ಟ ಘಟನೆ ಮಾರುಕೇರಿ ಕೋಟಖಂಡದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ರಾಘ ಸಣ್ಣುಗೊಂಡ ಕೋಟಖಂಡ ನಿವಾಸಿ ಎಂದು ತಿಳಿದು ಬಂದಿದೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಅಳವಡಿಸದೆ, ಜನರೇಟರ್‌ನ ಹಿಂದೆ ಮುಂದೆ ಯಾವುದೇ ರಿಫೆಕ್ಟರ್‌ನ್ನು ಅಳವಡಿಸದೇ ಇದ್ದುದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮೃತ ಸವಾರ ಪಲ್ಸರ್ ಬೈಕ್ ಮೇಲೆ ಚಲಿಸುತ್ತಿದ್ದಾಗ ಜನರೇಟರ್ ಬಡಿದು ರಸ್ತೆಯ ಮೇಲೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿ ಸವಾರ ಮೃತಪಟ್ಟಿದ್ದಾನೆ.

RELATED ARTICLES  ಪಕ್ಷಲ್ಲಿರುವ ಮನುಷ್ಯರೂ ಉಪ್ಪು, ಹುಳಿ, ಖಾರ ತಿನ್ನುವವರೇ : ಶಾಸಕ ದಿನಕರ ಶೆಟ್ಟಿ.