ಶಿರಸಿ:ನಗರದ ಮಧ್ಯಭಾಗದ ದೇವಿಕೆರೆ ಸಮೀಪದಲ್ಲಿರುವ ಚಿಲುಮೆ ಕೆರೆಯಲ್ಲಿ ವ್ಯಕ್ತಿಯೊರ್ವನ ಶವವೊಂದು ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯು ಅನಂತ ತಿಪ್ಪಯ್ಯ ನಾಯ್ಕ ಎಂದು ತಿಳಿದುಬಂದಿದ್ದು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಲ್ಲದೆ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಅಪರಿಚಿತ ಶವಗಳು ಕೆರೆಯಲ್ಲಿ ಪತ್ತೆಯಾಗುತ್ತಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.