ಕುಮಟಾ: ತಾಲೂಕಾ ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೂಜಳ್ಳಿಯ ಡಾ. ಎಂ.ಎಚ್. ನಾಯ್ಕರನ್ನು ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಸುಬ್ಬಯ್ಯ ನಾಯ್ಕ ತಿಳಿಸಿದ್ದಾರೆ. ಇತ್ತೀಚೆಗೆ ಕುಮಟಾದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಲಾಯಿತು. ಆ ಮೂಲಕ ಸರ್ವಾಧ್ಯಕ್ಷರಾಗಿ ಕೂಜಳ್ಳಿಯ ಡಾ. ಎಂ.ಎಚ್. ನಾಯ್ಕರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ ಉಪಸ್ಥಿತರಿದ್ದರು.

ಸರ್ವಾನುಮತದಿಂದ ಡಾಕ್ಟರ್ ಎಂ. ಎಚ್.ನಾಯ್ಕರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಡಾ. ಶ್ರೀಧರ್ ಗೌಡ ಉಪ್ಪಿನಗಣಪತಿ, ಕಸಾಪ ಕಾರ್ಯದರ್ಶಿಗಳಾದ ಪ್ರಮೋದ ನಾಯ್ಕ, ಪ್ರದೀಪ ನಾಯಕ, ಪದಾಧಿಕಾರಿಗಳಾದ ನಾಗರಾಜ ಶೆಟ್ಟಿ, ಸಂಧ್ಯಾ ಭಟ್ಟ, ಸುರೇಶ ಭಟ್ಟ, ಮಾಲಾ ನಾಯ್ಕ, ಪ್ರಕಾಶ ನಾಯ್ಕ, ವಿಜಯ ಗುನಗ,ಎಂ.ಎಂ.ಚಂದಾವರ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಕೊಳೆರೋಗ ನಿಯಂತ್ರಿಸಲು ಸುಲಭ ಉಪಾಯ....

ಡಾ. ಎಮ್. ಎಚ್ ನಾಯ್ಕರ ಕಿರು ಪರಿಚಯ.
ಮಂಜುನಾಥ ಹೊಸಬಯ್ಯ ನಾಯ್ಕರವರು 1956 ರಲ್ಲಿ ತಾಲೂಕಿನ ಕೂಜಳ್ಳಿ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಜಳ್ಳಿಯಲ್ಲಿಯೂ, ಪ್ರೌಢ ಶಿಕ್ಷಣ ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯಲ್ಲಿಯೂ, ಕುಮಟಾದ ಎ.ವಿ. ಬಾಳಿಗಾ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಮ್. ಎ. ಪದವಿ ಪಡೆದರು. 1979 ರಲ್ಲಿ ಕಾರವಾರದ ಕೆನರಾ ವೆಲ್ಸರ್ ಟ್ರಸ್ಟಿನ ದಿವೇಕರ ವಾಣಿಜ್ಯ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಪ್ರಾರಂಭಿಸಿದರು.

ನಂತರ ಇಂಗ್ಲಿಷ್ ಚಿಂತಕ, ಕಾದಂಬರಿಕಾರ, ಹೋರಾಟಗಾರ ಜಾರ್ಜ್‌ ಆರ್ವೆಲ್ ಕುರಿತು, ಸುಧಾರಣಾ ವಾದಿ ವ್ಯಕ್ತಿ ನಿಷ್ಠವಾದ ಒಂದು ಅಧ್ಯಯನ ಎನ್ನುವ ಪ್ರಬಂಧ ಮಂಡಿಸಿ 1995 ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಸಹಾಯಕ ಪ್ರೊಫೆಸರ್ ಆಗಿ ಬಡ್ತಿ ಹೊಂದಿ ಪ್ರಾಂಶುಪಾಲರಾಗಿ ಮೂರು ವರ್ಷ ಸೇವೆ ಸಲ್ಲಿಸಿ 2016 ರಂದು ನಿವೃತ್ತಿಯಾಗಿರುತ್ತಾರೆ.

RELATED ARTICLES  ಕರ್ತವ್ಯದಲ್ಲಿದ್ದ ಎ.ಎಸ್.ಐ ಸಾವು..!

ಮಾಜಿ ಸಂಸದ ದಿ. ಬಿ. ವಿ. ನಾಯಕ ಮತ್ತು ದಿ.ಎಸ್.ಆರ್. ನಾರಾಯಣ್ ರಾವ್ ಮುಂತಾದವರನ್ನೊಳಗೊಂಡ ಗಿಬ್ ಎನ್ನುವ ಚಿಂತನ ವೇದಿಕೆ ಸದಸ್ಯರಾಗಿಯೂ, ಸಂಚಾಲಕರಾಗಿಯೂ ಸುಮಾರು ಮೂರು ದಶಕಗಳ ಕಾಲ ನಿರ್ವಹಣೆ ಮಾಡಿದ ಅನುಭವ ಹೊಂದಿರುತ್ತಾರೆ. ದಿ ಟೈಮ್ಸ್ ಆಫ್ ಇಂಡಿಯಾ ವೃತ್ತ ಪತ್ರಿಕೆಯ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಸಂಯುಕ್ತ ಕರ್ನಾಟಕ, ಮುಂಗಾರು, ಸಂಕ್ರಮಣ, ಕರಾವಳಿ ಮುಂಜಾವು ಮುಂತಾದ ಪತ್ರಿಕೆಗಳಲ್ಲಿ ಪ್ರಚಲಿತ ವಿಷಯಗಳ ಕುರಿತು ಲೇಖನಗಳು ಪ್ರಕಟವಾಗಿವೆ. ಏಳು ವರ್ಷಗಳ ಕಾಲ ಮುಕ್ತ ಚಿಂತನ ಅಂಕಣ ಬರಹ 350ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.