ಶಿರಸಿ: ಬನವಾಸಿ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಆರೋಪಿ ಮುಂಡಗೋಡ ತಾಲೂಕಿನ ಲಕ್ಷ್ಮಣ ಫಕೀರಪ್ಪ ಹರಿಜನ್ ಎಂಬಾತನನ್ನು ಪೋಲಿಸರು ಬೈಕ್ ಸಮೇತವಾಗಿ ಬಂಧಿಸಿದ್ದಾರೆ. ಡಿವಾಯೆಸ್ಪಿ ಗಣೇಶ ಕೆ.ಎಲ್. ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಬನವಾಸಿ ಠಾಣೆ ಪಿಎಸ್ಆಯ್ ಹನುಮಂತ ಬಿರಾದಾರ್ ಪಾಲ್ಗೊಂಡಿದ್ದರು. ಆರೋಪಿಯು ಮಾರ್ಚ್ 21,2022 ರಂದು ಮಾದೇವ ದಾನ್ಯ ಚಲವಾದಿ ಎಂಬುವರ ಮನೆಯ ಮುಂದಿಟ್ಟಿದ್ದ ಬೈಕನ್ನು ಕಳ್ಳತನ ಮಾಡಿದ್ದನು.