ಕುಮಟಾ : ತಾಲೂಕಿನ ಹೆಗಡೆ ಗ್ರಾಮಪಂಚಾಯತ್ ವ್ಯಾಪ್ತಿಯ ನರಿಬೋಳೆ ಸರಕಾರಿ ಹಿರಿಯಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ನಡೆಸಿತು.

ಕಾರ್ಯಕ್ರಮವನ್ನು ಶಾಸಕ ದಿನಕರ‌ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ದಿನಕರ ಶೆಟ್ಟಿಯವರು ಸನ್ಮಾನ್ಯ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ರಾಜ್ಯಸರ್ಕಾರ ಹಾಗೂ ಸನ್ಮಾನ್ಯ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದು, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ಅತ್ಯುತ್ತಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿವೆ. ‘ವಿವೇಕ ಶಾಲೆ’ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ವನ್ನು ಒದಗಿಸಿದೆ. ಅಲ್ಲದೆ ಶಿಕ್ಷಣ ಸಚಿವರಾದ ಮಾನ್ಯ ಬಿ. ಸಿ. ನಾಗೇಶ್ ಅವರು ಶಾಲಾ ಕೊಠಡಿಗಳ ದುರಸ್ಥಿಗೆ ಹೆಚ್ಚುವರಿ ಅನುದಾನವನ್ನು ನಮ್ಮ ಕ್ಷೇತ್ರಕ್ಕೆ ಒದಗಿಸಿದ್ದಾರೆ” ಎಂದು ಹೇಳಿದರು.

RELATED ARTICLES  ಗೋಕರ್ಣ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಂಚಗ್ರಹ ಹಿರೇಮಠ ಸ್ವಾಮಿಗಳು

ಹೆಗಡೆ ಗ್ರಾಮಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಪಟಗಾರ, ಉಪಾಧ್ಯಕ್ಷ ಶಾಂತಾರಾಮ ನಾಯ್ಕ್ ಹಾಗೂ ಸದಸ್ಯರುಗಳಾದ ಆಶಾ ಶ್ರೀಧರ ನಾಯ್ಕ್, ಸುರೇಶ ಎಂ. ಪಟಗಾರ, ನಾಗರಾಜ ಎಸ್. ಮುಕ್ರಿ, ಸಿ. ಆರ್. ಪಿ. ಎನ್. ಆರ್. ನಾಯ್ಕ್, ಎಸ್.ಡಿ.ಎಂ.ಸಿ ಅಧ್ಯಕ್ಷ ದಿವಾಕರ ಪಟಗಾರ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ವಿಷ್ಣು ಪಟಗಾರ, ಮುಖ್ಯಾಧ್ಯಾಪಕಿ ನಾಗವೇಣಿ ಪಟಗಾರ ಮತ್ತಿತರರು ಇದ್ದರು.

RELATED ARTICLES  ಡಾ.ಬಿ.ಎ.ಸನದಿ ಬುಕ್ ಕಾರ್ನರ್ ಗೆ ಕೆ.ವಿ.ತಿರುಮಲೇಶ್ ಸಾಹಿತ್ಯ ಕೃತಿಗಳ ಕೊಡುಗೆ