ಯಲ್ಲಾಪುರ: ಕಂಠಪೂರ್ತಿ ಕುಡಿದು ನಶೆಯಲ್ಲಿ ಮಲಗಿದ್ದವನ ಜೇಬಿಗೆ ಒರ್ವ ವೃದ್ಧೆ ಕೈ ಹಾಕಿ ಹಣ ಎಗರಿಸಿದ ಘಟನೆ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ನಡೆದಿದೆ. ಈ ಚಾಲಾಕಿ ಅಜ್ಜಿಯ ಕೈ ಚಳಕ ಕಂಡ ಕೆಲ ಪ್ರಯಾಣಿಕರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಅಜ್ಜಿ ಕೈಚಳಕ ನೋಡಿ ದಂಗಾಗಿ ಹೋಗಿದ್ದಾರೆ. ಯಲ್ಲಾಪುರ ಸರ್ಕಾರಿ ಬಸ್ ಸ್ಟಾಂಡಿನ ನಂದಿನಿ ಹಾಲಿನ ಕೌಂಟರ್ ಬಳಿ ನಶೆಯಲ್ಲಿ ಯುವಕನೊಬ್ಬ ಮಲಗಿದ್ದ. ಅಲ್ಲಿಗೆ ಬಂದ ಅಜ್ಜಿ, ಆತನ ಜೇಬಿಗೆ ಕೈ ಹಾಕಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಹಣ ಸಿಕ್ಕಿದ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.