ಹಳಿಯಾಳ: ಪಟ್ಟಣದ ಯಲ್ಲಾಪುರ ನಾಕಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಮೆಕ್ಯಾನಿಕ್ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಧಾರವಾಡ ಜಿಲ್ಲೆ ಅಳ್ನಾವರ ಪಟ್ಟಣದ ದಿನೇಶ ಮುಚ್ಚಂಡಿ (42) ಬೈಕ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಹಳಿಯಾಳ- ಯಲ್ಲಾಪುರ ರಾಜ್ಯ ಹೆದ್ದಾರಿಯ ಪಟ್ಟಣದ ಯಲ್ಲಾಪುರ ನಾಕಾಬಳಿಯ ತನ್ನ ಗ್ಯಾರೇಜ್‌ಗೆ ತೆರಳಲು ಬೈಕ್ ತಿರುಗಿಸುತ್ತಿದ್ದ ಸಂದರ್ಭದಲ್ಲಿ ವಾಹನ ಬಡಿದು ಸ್ಥಳದಲ್ಲಿ ಬಿದ್ದಿದ್ದ ಈತನ ಮೈಮೇಲಿಂದ ವಾಹನ ಹರಿದ ಪರಿಣಾಮ ಸ್ಥಳದಲ್ಲಿಯೇ ದಿನೇಶ ಮೃತಪಟ್ಟಿದ್ದಾನೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.